ಜನ ಮನದ ನಾಡಿ ಮಿಡಿತ

Advertisement

ವಿದ್ಯಾರ್ಥಿಗಳಿಂದ ಸ್ಪೂರ್ತಿ ವಿಶೇಷ ಶಾಲೆಗೆ ಸಹಾಯಧನ ಹಸ್ತಾಂತರ

ಮೂಡುಬಿದಿರೆ : ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಮತ್ತು ಶಾರದ ಮಹೋತ್ಸವದ ಸಂದರ್ಭದಲ್ಲಿ 8 ಮಂದಿ ವಿದ್ಯಾರ್ಥಿಗಳು ಸೇರಿ ಸಹಾಯಕ್ಕಾಗಿ ಸಾರ್ವಜನಿಕರಿಂದ ಧನವನ್ನು ಸಂಗ್ರಹಿಸಿದ್ದು, ಒಟ್ಟಾಗಿರುವ ರೂ 14,860 ಮೂಡುಬಿದಿರೆ ಅರಮನೆ ಬಾಗಿಲಿನಲ್ಲಿ ಸ್ಪೂರ್ತಿ ವಿಶೇಷ ಸಾಮಥ್ಯ ೯ದ ಮಕ್ಕಳ ಶಾಲೆಗೆ ಹಸ್ತಾಂತರಿಸಿದರು.


ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಾದ ತುಷಿತಾ, ತುಷಾರ, ರಶ್ಮಿತಾ,ತ್ರಿಷಾ, ಅನುಷಾ, ಧನುಷ್, ಶರಣ್ ಮತ್ತು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಕಲ್ಲಬೆಟ್ಟು ಇಲ್ಲಿನ ವಿದ್ಯಾರ್ಥಿ ಚಿತ್ರೇಶ್ ಈ ಉತ್ತಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


ಸ್ಪೂರ್ತಿ ವಿಶೇಷ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಗಾರ್ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಸಹಾಯಧನವನ್ನು ಸ್ವೀಕರಿಸಿ ವಿದ್ಯಾರ್ಥಿಗಳ ಸಹಕಾರದ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!