ಪೆರ್ಲ: ಬಿಎಡ್ ವ್ಯಾಸಂಗ ನಿರತನಾಗಿದ್ದ ವಿದ್ಯಾರ್ಥಿಯೋರ್ವ ಡೆತ್ ನೋಟ್ ಬರೆದಿಟ್ಟು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಎಣ್ಮಕಜೆ ಗ್ರಾಮ ಪಂಚಾಯತಿನ ಪಜ್ಜಾನ ಎಂಬಲ್ಲಿ ನಡೆದಿದೆ.
ಇಲ್ಲಿನ ಬಡಗಿ ವೃತ್ತಿ ನಿರ್ವಹಿಸುವ ಸಿಲ್ವೆಸ್ಟರ್ ಕ್ರಾಸ್ತಾ ಎಂಬವರ ಪುತ್ರ ಐವನ್ ಕ್ರಾಸ್ತ (23) ಎಂಬ ಯುವಕನ ಮೃತದೇಹ ನ.7ರಂದು ಸಂಜೆ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.
ತೊಕ್ಕೊಟಿನ ಕಾಲೇಜುವೊಂದರಲ್ಲಿ ಬಿಎಡ್ ವಿದ್ಯಾರ್ಥಿಯಾಗಿರುವ ಈತ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಿದ್ದಂತೆ ಕಂಡು ಬರುತ್ತಿದ್ದು ನ.6ರಂದು ರಾತ್ರಿ ಊಟ ಮಾಡಿ ಮಲಗಿದ್ದ. ಮರುದಿನ ನ.7ರಿಂದ ಬೆಳಗ್ಗೆ ಈತ ನಾಪತ್ತೆಯಾಗಿದ್ದು ಬೆಳಗ್ಗೆಯೇ ಎದ್ದು ಕಾಲೇಜಿಗೆ ಹೋಗಿರಬೇಕೆಂದು ಭಾವಿಸಿದ್ದರು. ಸಂಜೆ ಕಾಲೇಜು ಬಿಟ್ಟು ಬಾರದಿರುವಾಗಲೂ ಕಾಣದಿದ್ದು ಮನೆಯವರು ಹುಡುಕಾಡಿದಾಗ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಈತ ಮಲಗುವ ಕೋಣೆಯೊಳಗೆ “ನನ್ನ ಸಾವಿಗೆ ನಾನೇ ಕಾರಣ” ಎಂದು ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿದ್ದು ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪಂಚೆನಾಮೆ ನಡೆಸಿ ನ.8ಕ್ಕೆ (ಇಂದು) ಸಂಜೆ 4 ಗಂಟೆಗೆ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನಲ್ಲಿ ಸಂಸ್ಕರಿಸಲಾಗುವುದೆಂದು ಮನೆಯವರು ತಿಳಿಸಿದ್ದಾರೆ. ಮೃತರು ತಂದೆ,ತಾಯಿ ನತಾಲಿಯ ಡಿಸೋಜ, ಸಹೋದರ ಮೇಲ್ವಿನ್ ಕ್ರಾಸ್ತ (ಶೇಣಿ ಶಾಲಾ ವಿದ್ಯಾರ್ಥಿ) ಎಂಬವರನ್ನಗಲಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…