ಪುತ್ತೂರಿನಲ್ಲಿ ಹತ್ಯೆಯಾದ ಕಲ್ಲೇಗ ಟೈಗರ್ಸ್ ಸ್ಥಾಪಕ ಅಕ್ಷಯ್ ಕಲ್ಲೇಗರವರ ಮನೆಗೆ ಹಿಂದೂ ಮುಖಂಡ ಅರುಣ್ ಪುತ್ತಿಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇವರು ನಿನ್ನೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ತೆರಳಿದ್ರು, ಈ ಹಿನ್ನೆಲೆ ಇಂದು ಪುತ್ತೂರಿಗೆ ಆಗಮಿಸಿದ್ದಾರೆ. ಬಳಿಕ ಅಕ್ಷಯ್ ಮನೆಯವರ ಜೊತೆ ಮಾತಾನಾಡಿ, ಘಟನೆ ನಡೆದ ದಿನವೇ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ, ಅಕ್ಷಯ್ ಕಲ್ಲೇಗ ಕೊಲೆ ಆರೋಪಿಗಳಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ಆಗಬೇಕು. ಇನ್ನೂ ಪುತ್ತೂರಿನಲ್ಲಿ ಠಾಣೆಯ ಹಿಡಿತದಲ್ಲಿರುವ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಇಲಾಖೆ ಆದಷ್ಟು ಶೀಘ್ರ ಪುತ್ತೂರಿನ ಸಿಸಿಟಿವಿಗಳನ್ನು ಸರಿ ಮಾಡಿ ರಾತ್ರಿ ಹೊತ್ತು ಗಸ್ತು ಹೆಚ್ಚಿಸಬೇಕು ಅಂತ ಹೇಳಿದ್ರು.



