ಜನ ಮನದ ನಾಡಿ ಮಿಡಿತ

Advertisement

ಯು.ಎ.ಇ.ಯ ರಾಜಧಾನಿ ಅಬುಧಾಬಿಯಲ್ಲಿಕರ್ನಾಟಕ ಸಂಘದಿಂದ ಕಾರ್ಯಕ್ರಮ

ದುಬೈ : ಯು.ಎ.ಇ.ಯ ರಾಜಧಾನಿ ಅಬುಧಾಬಿಯಲ್ಲಿ ಕಳೆದ 43 ವರ್ಷಗಳಿಂದ ಕನ್ನಡ ಭಾಷೆ, ನಾಡು,ನುಡಿಯ,ಸಂಸ್ಕೃತಿಯ ಉಳಿಸಿಕೊಂಡು ಬಂದಿರುವ ಅಬುಧಾಬಿ ಕರ್ನಾಟಕ ಸಂಘದ 44 ನೇ ವರ್ಷದ “ಕರ್ನಾಟಕ ರಾಜ್ಯೋತ್ಸವ” ನವಂಬರ್ 5 ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಜರಗಿತು.


‌‌‌‌‌‌‌ ಅಬುಧಾಬಿಯ ಭಾರತೀಯ ರಾಯಭಾರಿಯ ಉಪ ಮುಖ್ಯಸ್ಥ ಗೌರವಯುತ ಎ.ಅಮರನಾಥ ಮತ್ತು ಇಂಡಿಯನ್ ಸೊಸಿಯಲ್ ಸೆಂಟರ್ ನ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಬಾಲಜಿ ರಾಮಸ್ವಾಮಿ ಕೌನ್ಸಿಲರ್ ಇಂಡಿಯನ್ ಅಂಬಾಸಿ ಅಬುಧಾಬಿಯವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಗೀತೆ, ಹಾಸ್ಯ ಕವಿ ಪುಷ್ಕಲ್ ಕುಮಾರ್ ತೋನ್ಸೆ ದಂಪತಿಗಳು, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಕನ್ನಡಿಗರು ದುಬೈಯ ಸಾಧನ್ ದಾಸ್,ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಅನಂತ ರಾವ್,ಶ್ರೀಮತಿ ನಮಿತ ಅನಂತ ರಾವ್ ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ದೀಪ ಬೆಳಗಿಸಿ ಕನ್ನಡಾಂಬೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕನ್ನಡ ನಾಡು ನುಡಿ, ಭಾಷೆಗೆ ಸದಾಕಾಲವೂ ಯುಎಇಯಲ್ಲಿ ದುಡಿಯುತ್ತಿರುವ ಓರ್ವರನ್ನು ಆಯ್ಕೆ ಮಾಡಿ ವರ್ಷಂಪ್ರತಿ ನೀಡುತ್ತಿರುವ ದ.ರಾ.ಬೇಂದ್ರೆ ಪ್ರಶಸ್ತಿಯನ್ನು ಈ ವರ್ಷ ಅಬುಧಾಬಿ ಕರ್ನಾಟಕ ಸಂಘದ ಕಳೆದ ಹಲವಾರು ವರ್ಷಗಳ ಕಾಲ ದುಡಿದು ಈಗ ತವರೂರಿನಲ್ಲಿ ನೆಲೆನಿಂತ ಅನಂತ ರಾವ್ ಮತ್ತು ಶ್ರೀಮತಿ ನಮೀತ ಅನಂತ ರಾವ್ ದಂಪತಿಗಳಿಗೆ ನೀಡಿ ಗೌರವಿಸಲಾಯಿತು.ಹಾಗೂ ಅಬುಧಾಬಿ ರಾಜ್ಯದಲ್ಲಿ ಕಲಿಯುತ್ತಿರುವ ಅತ್ಯಧಿಕ ಅಂಕ ಗಳಿಸಿದ ಕನ್ನಡದ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.ಕರೋನ ಸಮಯದಲ್ಲಿ ಕರೋನ ವಾರಿಯರ್ಸ್‌ ಆಗಿ ದುಡಿದ ಡಾ.ಪೂರ್ಣಿಮಾ ಹೆಗ್ಡೆ,ವಿಜ್ಞಾನಿ ಡಾ.ದಿನೇಶ್ ಶೆಟ್ಟಿ,ಕನ್ನಡ ಕಲಿಸು ಸೇವೆಯ ಜಯಲಕ್ಷ್ಮಿ ಸುರೇಶ್ ಭಟ್,ಡಾ.ಎಂ.ಎ.ಮುಮ್ಮಿಗಟ್ಟಿಯವರನ್ನು ಗೌರವಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಘದ ಸದಸ್ಯ ಸದಸ್ಯೆಯರಿಂದ ನೃತ್ಯ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮ ಜರುಗಿತು. ದಿ.ಪುನಿತ್ ರಾಜ್ ಕುಮಾರ್ ರವರ ಸವಿ ನೆನಪಿಗಾಗಿ ಪುನಿತ್ ರಾಜ್ ಕುಮಾರವರ ಜೀವನ ಸಾರ ಸಾರುವ ವಿಶೇಷ ಶೈಲಿಯ ನೃತ್ಯ ಕಾರ್ಯಕ್ರಮ ನಡೆಯಿತು ಮತ್ತು ತೋನ್ಸೆ ಪುಷ್ಕಲ್ ಕುಮಾರ್ ರವರು ಹಾಸ್ಯ ಭಾಷಣದ ಮೂಲಕ ಎಲ್ಲರನ್ನೂ ಮನರಂಜಿಸಿದರು.


ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರಾಯೋಜಕರನ್ನು ಮತ್ತು ಯುಎಇಯ ವಿವಿಧ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮನೋಹರ್ ತೋನ್ಸೆ,ಲೋಯೊಲೊ ಫಿಂಟೋ,ಬೆನೇಟ್ ಡಿ.ಮೆಲ್ಲೊ,ಪ್ರದೀಪ್ ಕೀರೋಡಿಯನ್,ಸುಧೀರ್ ಶೆಟ್ಟಿ, ಅಲ್ತಫ್ ಎಂ.ಎಸ್,ಅಬ್ದುಲ ಮಾದುಮೂಲೆ,ವಿಜಯ್ ರಾವ್,ಸಂದೀಪ್ ರಾವ್,ಚೇತನ್ ಗೋಪಲ್,ಶ್ರೀ ಕೃಷ್ಣ ಕುಲಾಲ್,ಕೃಷ್ಣರಾಜ ರಾವ್,ಶ್ರೀನಿವಾಸ್ Urs,ಈಶ್ವರ್ ಉಣಕಲ್ಲ್,ಯತಿರಾಜ್ ಶೆಟ್ಟಿ, ಡಾ.ರಾಘವ ಭಟ್ ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.ಶ್ರೀ ಕೃಷ್ಣ ಕುಲಾಲ್,ಮನೋಹರ ತೋನ್ಸೆ,ಶೋಭಿನಿ ಹೆಗ್ಡೆ, ಡಾ.ರಾಘವ ಭಟ್ ಕಾರ್ಯಕ್ರಮ ನಿರೂಪಿಸಿದರು.ಅನಂತ ರಾವ್ ಸ್ವಾಗತಿಸಿ,ಸರ್ವೋತ್ತಮ ಶೆಟ್ಟಿಯವರು ಧನ್ಯವಾದವಿತ್ತರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ಶಿವ್ ಗೌಡ ಅಬುಧಾಬಿ


Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!