ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆಯುವುದು ಅತೀ ಅಗತ್ಯ. ಇದರೊಂದಿಗೆ ಸಂಸ್ಕಾರ, ಆಚಾರ-ವಿಚಾರಗಳನ್ನು ದೇವಾಲಯದ ಸಂಬಂಧ ಪಟ್ಟ ವಿಭಾಗವು ನಡೆಸಿದರೆ ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗುತ್ತದೆ ಇಂತಹ ಕಾರ್ಯಕ್ರಮವನ್ನು ಸಿಎಸ್ಐ ಜಿಲ್ಲಾ ಸಮಿತಿಯು,ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಅತಿಥೇಯದಲ್ಲಿ ನಡೆಸಿರುವುದು ಅಭಿನಂದನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ರೈ ಯವರು ನುಡಿದರು.
ಅವರು ಸಿಎಸ್ಐ ಕೆಎಸ್‌ಡಿ ದಕ್ಷಿಣ ಕನ್ನಡ ಪ್ರದೇಶ ಪರಿಷತ್ತು ಮತ್ತು ಸಿ ಎಸ್ ಐ ಅಮ್ಮನ್ ಮೆಮೋರಿಯಲ್ ಚರ್ಚ್ ಹಳೆಯಂಗಡಿ ಇದರ ಆಶ್ರಯದಲ್ಲಿ ನಡೆದ ಜಾಗತಿಕ ಭಾನುವಾರ ಶಾಲಾ ದಿನಾಚರಣಿ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಈ ಮೇಲಿನಂತೆ ನುಡಿದರು.
ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಪ್ರಾದೇಶಿಕ ಪರಿಷತ್ ನ ಅಧ್ಯಕ್ಷರಾದ ರೆವೆ.ವಿಲಿಯಂ ಬಿ. ಕುಂದರ್ ವಹಿಸಿದ್ದರು
ಸಿಎಸ್ಐ ಕೆ ಎಸ್ ಡಿ ಇದರ ಖಜಾಂಚಿಯಾದ ಶ್ರೀ ವಿನ್ಸೆಂಟ್ ಪಾಲನ್ನ ಮಾತನಾಡಿ ಈ ವರ್ಷದ ಜಾಗತಿಕ ಭಾನುವಾರ ಶಾಲಾ ದಿನಾಚರಣೆಯನ್ನು ಹಳೆಯಂಗಡಿಯವರು ಅತಿ ಮೌಲ್ಯಯುತವಾಗಿ ನಡೆಸಿದ್ದು, ಡಯಾಸಿಸ್ ನ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ರೆ. ಜಾರ್ಜ್ ಎ. ಬೆರ್ನಾರ್ಡ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿಯಾದ ಶ್ರೀಮತಿ ಜಾಯ್ಸ್ ವಿನಯ ಬಂಗೇರ ಭಾಗವಹಿಸಿದ್ದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಪ್ರದೇಶ ಪರಿಷತ್ ನ ಉಪಾಧ್ಯಕ್ಷರಾದ ರೆವೆ. ಗ್ಯಾಬ್ರಿಯಲ್ ರೋನಿತ್, ಕಾರ್ಯದರ್ಶಿ ಜಯವಂತಿ ಪೌಲ್, ಖಜಾಂಚಿ ಕೌಶಿಕ್ ಅಮ್ಮನ್ನ, ಹಳೆಯಂಗಡಿ ಸಭಾ ಪಾಲಕರಾದ ರೆವೆ. ಅಮೃತ್ ರಾಜ್ ಖೋಡೆ, ಪಣಂಬೂರು ಸಭಾ ಪಾಲಕರಾದ ರೆವೆ. ಸಂಧ್ಯಾ ಖೋಡೆ, ಸಭಾ ಪರಿಪಾಲನ ಸಮಿತಿಯ ಆಸ್ಟಿನ್ ಕರ್ಕಡ, ವಸಂತ್ ಬೆರ್ನಾರ್ಡ್, ಲಾವಣ್ಯ ಕೋಟ್ಯಾನ್, ಶರ್ಲಿ ಬಂಗೇರ, ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರದೇಶ ಪರಿಷತ್ ನ ಕಾರ್ಯದರ್ಶಿಯಾದ ಶ್ರೀಮತಿ ಜಯವಂತಿ ಪೌಲ್ ರವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಶರ್ಲಿ ಬೆರ್ನಾರ್ಡ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…