ಬಂಟ್ವಾಳ: ಮಕ್ಕಳ ಪೌಷ್ಟಿಕಾಂಶ ಪಡೆಯುವಿಕೆ ಮತ್ತು ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಸರ್ಕಾರ ಜಾರಿ ಮಾಡಿದ ಅಂಗನವಾಡಿ ಕೇಂದ್ರವನ್ನು ಬಿಡದ ಕಳ್ಳರು , ಅಂಗನವಾಡಿಯೊಂದಕ್ಕೆ ನುಗ್ಗಿ ಅಲ್ಲಿ ಮಕ್ಕಳಿಗೆ ತಿನಿಸುಗಳನ್ನು ತಯಾರಿಸಲು ತಂದಿರಿಸಲಾಗಿದ್ದ ಸಾವಿರಾರು ರೂ ಮೌಲ್ಯದ ವಿವಿಧ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬೊಂಡಾಲ ಎಂಬಲ್ಲಿ ನಡೆದಿದೆ.
ಪಾಣೆಮಂಗಳೂರು ಗ್ರಾಮದ ಬೊಂಡಾಲ ಸಮೀಪದ ಶಾಂತಿ ಗುಡ್ಡೆ ಎಂಬಲ್ಲಿನ ಅಂಗನವಾಡಿಯಿಂದ ಸುಮಾರು 7 ಸಾವಿರ ರೂ ಮೌಲ್ಯದ ವಿವಿಧ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ದೇವಕಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಂಗನವಾಡಿಯಲ್ಲಿದ್ದ ಅಲ್ಯುಮಿನಿಯಂ ಕುಕ್ಕರ್ 10 ಲೀ-1 ಅಂದಾಜು ಮೌಲ್ಯ 1500/- ರೂ, ಅಲ್ಯುಮಿನಿಯಂ ಕುಕ್ಕರ್ 5 ಲೀ-1 ಅಂದಾಜು ಮೌಲ್ಯ 1000/- ರೂ, ಅಲ್ಯುಮಿನಿಯಂ ಡಬ್ಬ ಹಾಗೂ ಮುಚ್ಚಳ-2 ಅಂದಾಜು ಮೌಲ್ಯ 3000/- ರೂ, ರೂ, 1000/- ರೂ ನಗದು ಹಾಗೂ ದಿನಸಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 134/2023 ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯ ಹಾಗೂ ಅವರು ಎಲ್ಲಿದ್ದಾರೆ ಎಂಬ ಕುರಿತು ಜಾಗತಿಕ ಮಟ್ಟದಲ್ಲಿ…
ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಸಮೀಪದ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 15…
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳಕ್ಕೆ ತೆರಳಲು ಬಂಟ್ವಾಳದಿಂದ ಶುಕ್ರವಾರ ಎರಡು ಉಚಿತ…
ರಾಷ್ಟ್ರೀಯ ಹೆದ್ದಾರಿ 75ರ ಸುರಿಕುಮೇರು ಸಮೀಪದ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು…
ಬಿ.ಸಿ.ರೋಡ್‌ನ ಎನ್.ಜಿ. ಸರ್ಕಲ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.…
ಕಳೆದ ಒಂದು ವಾರದಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು…