ಕೋಟಿ ಚೆನ್ನಯ ಜೊಡುಕರೆ ಕಂಬಳ ಸಮಿತಿಯ ವತಿಯಿಂದ ಡಿ.೧೭ ಮತ್ತು ೧೮ ರಂದು ನಡೆಯಲಿರುವ ಮೂಡುಬಿದಿರೆ ಕಂಬಳದ ಕುರಿತು ಸಮಾಲೋಚನಾ ಸಭೆಯು ಸೃಷ್ಠಿ ಗಾರ್ಡನ್‌ನಲ್ಲಿ ನಡೆಯಿತು. ಈ ವೇಳೆ ಕಂಬಳ ಸಮಿತಿಯ ಅಧ್ಯಕ್ಷರಾದ ಶಾಸಕ ಉಮಾನಾಥ ಕೋಟ್ಯಾನ್‌ರವರು ಮಾತಾನಾಡಿ, ಅವಿಭಜಿತ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಕೋಣಗಳು ಭಾಗವಹಿಸುವ ಕಂಬಳ ಇದಾಗಿದ್ದು, ಶಿಸ್ತು ಅಚ್ಚುಕಟ್ಟು ಮತ್ತು ಸಮಯ ಪರಿಪಾಲನೆಗೆ ಹೆಸರಾಗಿದೆ.

ಈ ಗೌರವವನ್ನು ಮುಂದಿನ ಕಂಬಳಗಳಲ್ಲಿಯೂ ಉಳಿಸಿಕೊಳ್ಳಬೇಕು. ಹಿಂದಿನ ಕಂಬಳದ ಸಮಯದಲ್ಲಿ ತಾವು ಯಾರ ಬಳಿಯೂ ಧನದ ಸಹಕಾರವನ್ನು ಕೇಳಿಲ್ಲ. ಈ ಬಾರಿ ಕಂಬಳವು ವೈಭವಯುತವಾಗಿ ನಡೆಯಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಬದಲ್ಲಿ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾದ ಭಾಸ್ಕರ್ ಎಸ್. ಕೋಟ್ಯಾನ್, ಕೆಎಂಎಫ್ ಅಧ್ಯಕ್ಷರಾದ ಕೆಪಿ ಸುಚರಿತ ಶೆಟ್ಟಿ, ಕಂಬಳ ಸಮಿತಿಯ ಕಾರ್ಯದರ್ಶಿಯಾದ ರಂಜಿತ್ ಪೂಜಾರಿ, ಬಿಜೆಪಿ ಮುಖಂಡರಾದ ಕೆ.ಪಿ ಜಗದೀಶ, ಅಧಿಕಾರಿಯಾದ ಸುನಿಲ್ ಆಳ್ವ, ಈಶ್ವರ ಕಟೀಲು, ನಾಗರಾಜ ಪೂಜಾರಿ, ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು.



