ಬಿಜೆಪಿ ಯುವಮೋರ್ಚಾದ ವತಿಯಿಂದ 4ನೇವರ್ಷದ ದೀಪಾವಳಿ ದೋಸೆ ಹಬ್ಬವು ನ. 13 ರಂದು ಬೆಳಗ್ಗೆಯಿಂದ ಸಂಜೆಯ ತನಕ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ನಡೆಯಲಿದೆ.ಬೆಳಗ್ಗೆ 10 ರಿಂದ ಸಂಜೆ 5 ರವರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ರಿಂದ 6ರವರೆಗೆ ಕುಣಿತ ಭಜನೆ, ಸಂಜೆ 6ರಿಂದ 7ರ ವರೆಗೆ ಗೋಪೂಜೆ, ಸಹಸ್ರ ಹಣತೆ ಪ್ರಜ್ವಲನೆ, ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8ರಿಂದ ಸುಡುಮದ್ದು, ಬಳಿಕ ಮೈತಿದಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.




