ಮುಲ್ಕಿ:ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳ ಗಂಗೋತ್ರಿಯ ಸಂಯೋಜನೆಯಲ್ಲಿ
ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕ, ಸುರತ್ಕಲ್ ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಹಳೆಯಂಗಡಿ ಸಮೀಪದ ಪಾವಂಜೆಯ ನದಿ ತಟದ ನಿನಾದ ರಂಗಮಂದಿರದ ವಠಾರದಲ್ಲಿ ಕೃಷಿ ನಿನಾದ ಮಣ್ಣಿನೊಳಗಿನ ಅನ್ನ ವಿದ್ಯಾರ್ಥಿಗಳಿಗೊಂದು ಕೃಷಿ ಪರಿಚಯ ಶಿಬಿರ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ವಿ ವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಉದ್ಘಾಟಿಸಿ ಮಾತನಾಡಿ ಇಂದಿನ ಯುವ ಜನಾಂಗಕ್ಕೆ ಹಿರಿಯರ ಕೃಷಿ ಬದುಕು ಹಾಗೂ ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ ಎಂದರು.
ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕ ಡಾ|ಗಣೇಶ್ ಅಮೀನ್ ಸಂಕಮಾರ್, ಮಾತನಾಡಿ ನಮಗೆ ಸಾಮಾಜಿಕ ಜಾಲತಾಣದ ಗೂಗಲ್ ತಂದೆ ತಾಯಿಯಲ್ಲ, ಹಿಂದಿನ ಕಾಲದ ಹಿರಿಯರೇ ನಮ್ಮ ಗೂಗಲ್ ಅವರಿಗೆ ಗೌರವ ಕೊಡುವ ಮುಖಾಂತರ ಹಿಂದಿನ ಕಾಲದ ಕೃಷಿ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವುದು ಯುವ ಜನಾಂಗದ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಸುಮ ಕಡಂಬೋಡಿ ಮಹಾಬಲ ಪೂಜಾರಿ ವಹಿಸಿದ್ದರು
ಜನಪದ ವಿದ್ವಾಂಸ ,ಖ್ಯಾತ ವ್ಯೆದ್ಯ ಡಾ. ವೈ.ಎನ್. ಶೆಟ್ಟಿ ಯವರು ನಾರಾಯಣ ಗುರು ಮಣ್ಣಿನೊಳಗಿನ ಸತ್ತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು
ಕೃಷಿ ಪಾಠದಲ್ಲಿ ಜನಪದ ತಜ್ಞ,ವಿಶ್ರಾಂತ ಶಿಕ್ಷಕ ಕೆ ಕೆ ಪೇಜಾವರರವರು ಮಣ್ಣು-ಅನ್ನದೊಳಗಿನ ತುಳು ಭಾಷೆ ಕುರಿತು,ಆಕೃತಿ ಆಶಯ ಪಬ್ಲಿಕೇಶನ್ ನ ಪ್ರಕಾಶಕ ಕಲ್ಲೂರು ನಾಗೇಶ್ ರವರು ಬೆವರಿನ ಅರಿವು-ಅನ್ನದ ಹರಿವು ಕುರಿತು ಉಪನ್ಯಾಸ ನೀಡಿದರು
ಮುಖ್ಯ ಅತಿಥಿಗಳಾಗಿ ಕಾಟಿಪಳ್ಳ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ ದಯಕರ್, ಹಳೆಯಂಗಡಿಯ ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ವಸಂತ ಬೆರ್ನಾಡ್, ದಯಾನಂದ ನಾಯಕ್, ಸಂಯೋಜಕಿ ಜಯಂತಿ, ಕುಲ ಸಚಿವ ರಾಜು
ಮತ್ತಿತರರು ಉಪಸ್ಥಿತರಿದ್ದರು.



