ಮೂಡುಬಿದಿರೆಯ ಸಮಾಜ ಮಂದಿರ ಸಭಾ (ರಿ) , ಯುವ ವಾಹಿನಿ ಘಟಕದ ವತಿಯಿಂದ ಸಮಾಜ ಮಂದಿರದಲ್ಲಿ ಬೆದ್ರ ಗೂಡು ದೀಪ, ರಂಗೋಲಿ ಸ್ಪರ್ಧೆ-2023 ಸಮಾಜಮಂದಿರದಲ್ಲಿ ನಡೆಯಿತು.ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಮಂದಿರ ಸಭಾ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಪರಂಪರೆಯ ಬೆಳಕು ಎಲ್ಲೆಡೆ ಪಸರಿಸಿ ಸುಖ ಸಮೃದ್ಧಿ ನೆಮ್ಮದಿ ಸಿಗಲಿ ಎಂದು ಹಾರೈಸಿದ್ದಾರೆ.
ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ ಅಮೀನ್ ಸಂಕಮಾರ್ ದೀಪಾವಳಿಯ ಬಗ್ಗೆ ಮಾತನಾಡಿ ಅಂದಿನ ಕಾಲದಲ್ಲಿ ಹಿರಿಯರಿಗೆ ಬಡತನವಿತ್ತು. ಆದರೆ ಸಕಾಲದಲ್ಲಿ ಹಸಿವೆ, ಸೊಗಸಾದ ನಿದ್ದೆಯ ನೈಜ್ಯ ಶ್ರೀಮಂತಿಕೆಯಿತ್ತು. ಕೂಡು ಕುಟುಂಬಗಳ ಚಿತ್ರಣ ಕರಗಿ ಹೋಗುತ್ತಿದ್ದಂತೆ ಇಂದು ಹಬ್ಬಗಳ ಬೆಳಕು, ಸಂಭ್ರಮ ಕ್ಷೀಣವಾಗುತ್ತಿದೆ ಎಂದ್ರು. ಇನ್ನು ಇದೇ ವೇಳೆ ಸ್ಪೂರ್ತಿಭಿನ್ನ ಸಾಮಥ್ಯ೯ದ ಮಕ್ಕಳ ಶಾಲಾ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ದ ಹಾಗು ದ .ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ್ ಎ ಅವರನ್ನು ಗೌರವಿಸಲಾಯಿತು.
ಇನ್ನು ಈ ಸಂಧರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ, ರತ್ನ ವುಮೆನ್ ಕ್ಲಿನಿಕ್ನ ಡಾ. ರಮೇಶ್, ಸಮಾಜ ಮಂದಿರ ಸಭಾ ಕಾರ್ಯದರ್ಶಿ ಹೆಚ್. ಸುರೇಶ್ ಪ್ರಭು, ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್,ಯುವ ವಾಹಿನಿ ಕಾರ್ಯದರ್ಶಿ ವಿದೇಶ್ ಎಂ, ಡಾ. ಮುರಳೀಕೃಷ್ಣ ವಿ. ಉಪಸ್ಥಿತರಿದ್ದರು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…