ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ & ಮಹಿಳಾ ಮಂಡಲ(ರಿ) ಹಳೆಯಂಗಡಿ ವತಿಯಿಂದ ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಯುವತಿ & ಮಹಿಳಾ ಮಂಡಲದಲ್ಲಿ ಲಕ್ಷ್ಮಿ ಪೂಜೆಯು & ಆಯುಧ ಪೂಜೆಯ ಕಾರ್ಯಕ್ರಮವು ಶ್ರೀ ರಾಜನಾಥ ಭಟ್ ಹಳೆಯಂಗಡಿ ಇವರ ಮಾರ್ಗದರ್ಶನದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಮಂಡಲದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ರಶ್ವಿತಾ ,ಕಾರ್ಯದರ್ಶಿ ದಿವ್ಯಶ್ರೀ ಆರ್ ಕೋಟ್ಯಾನ್ ,ಕೋಶಾಧಿಕಾರಿ ನಿರ್ಮಿತ, ಮಹಿಳಾ ಮಂಡಲದ ಉಪಾಧ್ಯಕ್ಷೇ ಮಮತಾ ಪ್ರಭು, ಕಾರ್ಯದರ್ಶಿ ಪ್ರೇಮಲತಾ ಯೋಗಿಶ್, ಕೋಶಾಧಿಕಾರಿ ರಾಜೇಶ್ವರಿ ರಾಮನಗರ ಹಾಗೂ ಹೆಚ್ಚಿನ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು.



