ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರ ಗೌರವ ಮಾರ್ಗದರ್ಶನದಲ್ಲಿ ಭಕ್ತಿಭೂಷಣದಾಸ ಪ್ರಭೂಜಿ ಹಾಗೂ ವೃಂದಾವನದ ಶ್ರೀ ರಮೇಶ ಗೋಸ್ವಾಮಿಯವರ ನೇತೃತ್ವದಲ್ಲಿ ಗೋ ನವರಾತ್ರಿ ಉತ್ಸವ, 108 ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ ನಡೆಯಲಿದೆ ಎಂದು ಅಷ್ಟೋತ್ತರ ಶತ ಶ್ರೀಂದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಸಮಿತಿ ಕಾರ್ಯಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಅವರು ಹೇಳಿದ್ದಾರೆ.

ಇವರು ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ, ಇಂದಿನಿ0ದ ಪೂಜಾ ಕಾರ್ಯಕ್ರಮ ಆರಂಭಗೊAಡು, ನ.22ರವರೆಗೆ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಆಯೋಜನೆಗೊಂಡಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮದ ಗೋವಿನತೋಟ ಬ್ರಹ್ಮಗಿರಿಯ ಶ್ರೀ ರಾಧಾಸುರಭಿ ಗೋಮಂದಿರದಲ್ಲಿ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಸನಾತನ ಧರ್ಮದ ಉಳಿವಿಗಾಗಿ, ಭಕ್ತಜನರಲ್ಲಿ ಶ್ರೀಮಧ್ಭಾಗವತ ಮತ್ತು ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿಯನ್ನು ನೀಡಿದ್ದಾ



