ಒಂದೇ ಮನೆಯಲ್ಲಿ ನಾಲ್ವರ ಹತ್ಯಾಕಾಂಡ ನಡೆದಿದ್ದ ರಕ್ತಪಾತ ಬೆಚ್ಚಿ ಬೀಳಿಸಿದೆ. ಗಗನಸಖಿ ಅಯ್ನಾಸ್‌ಳನ್ನು ಬರ್ಬರವಾಗಿ ಹತ್ಯೆ ಮಾಡಿದ ಕಿರಾತಕನ ಕ್ರೌರ್ಯ ಬಗೆದಷ್ಟು ಬಯಲಾಗ್ತಿದೆ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಪ್ರವೀಣ ಚೌಗಲೆ ತಾನು ಯಾರು? ಅಯ್ನಾಸ್‌ಳನ್ನು ಕೊಲೆ ಮಾಡಲು ಕಾರಣವೇನು ಅನ್ನೋ ಸ್ಫೋಟಕ ಸಂಗತಿಗಳನ್ನ ಬಾಯ್ಬಿಟ್ಟಿದ್ದಾನೆ.
ಆರೋಪಿ ಪ್ರವೀಣ ಚೌಗಲೆ ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ. ಕ್ಯಾಬಿನ್ ಕ್ರ್ಯೂ ಅಂದ್ರೆ ವಿಮಾನ ಹತ್ತಿದ ಮೇಲೆ ಪ್ರಯಾಣಿಕರು ವಿವರಣೆ ನೀಡೋ ಕಾರ್ಯ. ಇದೇ ವಿಮಾನದಲ್ಲಿ ಸಹೋದ್ಯೋಗಿಯಾಗಿದ್ದು ಗಗನಸಖಿ ಅಯ್ನಾಸ್. ಅಯ್ನಾಸ್ ಅಂದ್ರೆ ಪ್ರವೀಣ್ ಅದೆಷ್ಟು ಇಷ್ಟ ಪಡುತ್ತಿದ್ದ ಅಂದ್ರೆ, ಅಯ್ನಾಸ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪ್ರವೀಣ್ ಚೌಗಲೆ ಹುಚ್ಚನಂತಾಗಿದ್ದ.
ಅಯ್ನಾಸ್ ತನ್ನಿಂದ ದೂರ ಮಾಡಿದ್ದಕ್ಕೆ ಕೋಪಗೊಂಡ ಪ್ರವೀಣ್ ಕೊಲೆ ಮಾಡಲು ನಿರ್ಧರಿಸಿದ್ದ. ಈತನ ಉದ್ದೇಶ ಅಯ್ನಾಸ್ ಒಬ್ಬಳನ್ನೇ ಕೊಲೆ ಮಾಡುವುದಾಗಿತ್ತು. ಆದರೆ, ಸಾಕ್ಷ್ಯ ನಾಶದ ಕಾರಣಕ್ಕೆ ಅಯ್ನಾಸ್ ಜೊತೆಗಿದ್ದ ಅಮ್ಮ, ತಮ್ಮ, ತಂಗಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪ್ರವೀಣ್ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಿಷ್ಟೇ ಅಲ್ಲ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಹಂತಕ ಪ್ರವೀಣ್ ಕೊಲೆ ಮಾಡೋದಕ್ಕೂ ಮೊದಲೇ ಅಯ್ನಾಸ್ ಮನೆಗೆ ಬಂದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಉಡುಪಿ ಪೊಲೀಸರು ಪ್ರವೀಣ್ ಹೆಜ್ಜೆ ಗುರುತನ್ನೇ ಹಿಂಬಾಲಿಸಿಕೊಂಡು ಹೋಗಿ ಬಂಧಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…