ಮಂಗಳೂರು: ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಜಿ.ಜಿ.ಲಕ್ಷ್ಮಣ ಪ್ರಭು ಅವರು ನ.17ರ ಶುಕ್ರವಾರದಂದು ನಿಧನ ಹೊಂದಿದರು.

ಡಾ. ಲಕ್ಷ್ಮಣ ಪ್ರಭು ಅವರಿಗೆ ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರಿಗೆ ವಾರದ ಹಿಂದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ ಹೃದಯಾಘಾತ ಉಂಟಾಗಿತ್ತು. ಬಳಿಕ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಪ್ರಭು ಅವರು ಈ ಹಿಂದೆ ಕರ್ನಾಟಕ ಮೂತ್ರಶಾಸ್ತ್ರ ಸಂಘದ ಪರಿಷತ್ತಿನ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ, ದಕ್ಷಿಣ ಮೂತ್ರಶಾಸ್ತ್ರಜ್ಞರ ಸಂಘದ ಕಾರ್ಯದರ್ಶಿಯಾಗಿ ಮತ್ತು ಯುರೊಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಹಿಂದಿನ ಐಎಂಎ ಡಿಕೆ ಶಾಖೆಯಲ್ಲಿ (ಈಗ ಐಎಂಎ ಮಂಗಳೂರು) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.



