ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನೆಲೆಸಿರುವ ಭಾರತೀಯ ಶ್ರೀಜು ಜಾಕ್ ಪಾಟ್ ಹೊಡೆದಿದ್ದಾರೆ. ವಾರದ ಡ್ರಾದಲ್ಲಿ ಮಹಜೂಜ್ 45.30 ಕೋಟಿಗಳನ್ನು ಗೆದ್ದಿದ್ದಾರೆ.

ಕೇರಳ ಮೂಲದ ಶ್ರೀಜು ಯುಎಇಯಲ್ಲಿ ಗ್ಯಾಸ್ ಉದ್ಯಮದಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ಅವರು ಈ ಡ್ರಾದಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚಿನ ಲಕ್ಕಿ ಡ್ರಾನಲ್ಲಿ ಶ್ರೀಜು ಹೆಸರು ಬಂದಿದ್ದು ಅವರು ಕೋಟ್ಯಧಿಪತಿ ಆಗಿದ್ದಾರೆ.




