ಮಲಯಾಳಂ ನಟ ವಿನೋದ್ ಥಾಮಸ್ ಅವರು ಹೊಟೇಲ್ ಒಂದರ ಸಮೀಪದ ಪಾರ್ಕಿಂಗ್‌ನಲ್ಲಿ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕಾರಿನೊಳಗೆ ನಿಶ್ಚಲವಾಗಿದ್ದ ನಟನನ್ನು ಕಂಡು ಹೊಟೇಲ್ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಗಲೇ ವಿನೋದ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಟನ ಸಾವಿಗೆ ನಿಖರ ಕಾರಣಗಳು ಗೊತ್ತಾಗಿಲ್ಲ. ಅಯ್ಯಪ್ಪನುಮ್ ಕೊಶ್ಯುಮ್, ನತ್ತೋಲಿ ಒರು ಚೆರಿಯ ಮೀನಲ್ಲ, ಒರು ಮುರೈ ವಂದ್ ಪಾತಾಯ ಹ್ಯಾಪಿ ವೆಡ್ಡಿಂಗ್, ಜೂನ್ ಮುಂತಾದ ಚಲನಚಿತ್ರಗಳಲ್ಲಿ ವಿನೋದ್ ನಟಿಸಿದ್ದಾರೆ.




