ಅಹ್ಮದಾಬಾದ್: ಇಂದು ಅಹಮದಬಾದಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ವಿಶ್ವಕಪ್ ನ್ನು ತನ್ನ ಮುಡಿಗೇರಿಸಿಕೊಂಡಿದೆ. ಭಾರತ ತಂಡವು ನೀಡಿದ 241 ರನ್ ಗುರಿಯನ್ನು ಬೆನ್ನಟ್ಟಿದ ಆಸೀಸ್ 43 ಓವರ್ ಗಳಲ್ಲಿ ತಲುಪಿದೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಆದರೆ ಟ್ರಾವಿಸ್ ಹೆಡ್ ಅವರ ಶತಕದ ನೆರವಿನಿಂದ ಹಾಗೂ ಮಾರ್ನಸ್ ಲಾಬುಶೆನ್ ರ ಉತ್ತಮ ಆಟದ ನೆರವಿನಿಂದ ಈ ಗುರಿಯನ್ನು ತಲುಪಿದೆ.




