ಉಡುಪಿ ರಥಬೀದಿ ಗೆಳೆಯರು ವತಿಯಿಂದ ಉಡುಪಿ ಎಂಜಿಎo ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನೆಹರೂ ಜಯಂತಿ ಪ್ರಯುಕ್ತ ಮಕ್ಕಳ ನಾಟಕ ಹಬ್ಬ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉದಯ ಕುಮಾರ್ ಇರ್ವತ್ತೂರು ಅವರು ಉದ್ಘಾಟಿಸಿದ್ದಾರೆ. ಬಳಿಕ ಮಾತಾನಾಡಿದ ಇವರು, ಆರ್ಥಿಕ ನೀತಿ ಮತ್ತು ಆಧುನಿಕತೆ ಕುರಿತ ನೆಹರೂ ಅವರ ಒಲವು ಅದ್ಭುತ. ಅವರು ದೇಶಕ್ಕೆ ನೀಡಿರುವ ಸೇವೆ ಅಪಾರ. ಆದರೆ ಅವರ ಬಗ್ಗೆ ಇಂದು ವಾಟ್ಸಾಪ್ ಯುನಿವರ್ಸಿಟಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಅಪಕಲ್ಪನೆಗಳನ್ನು ಬಿತ್ತಲಾಗುತ್ತಿದೆ.
ಆದುದರಿಂದ ಇಂದಿನ ಮಕ್ಕಳು ಈ ದೇಶ ನಿರ್ಮಾಣ ಮಾಡಿರುವ ಗಾಂಧಿ, ನೆಹರೂ ಸೇರಿದಂತೆ ಮಹತ್ವದ ವ್ಯಕ್ತಿಗಳ ಕುರಿತು ಓದು ಮತ್ತು ಅಧ್ಯಯನ ಮಾಡಬೇಕು ಅಂತ ಹೇಳಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಸಂಸ್ಥೆಯ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್, ಕಾರ್ಯದರ್ಶಿಯಾದ ಪ್ರೊ.ಸುಬ್ರಹ್ಮಣ್ಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



