ಬಂಟ್ವಾಳ: ಮಲ್ಲಿಗೆ ಪ್ರಿಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವರ ಸಾನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ 22ನೇ ವರ್ಷದ “ಶ್ರೀ ವಿಶ್ವರೂಪದರ್ಶನ” ನಡೆಯಿತು.

ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ ಅವರು ದೇವರ ಸಾನಿಧ್ಯದಲ್ಲಿರುವ ತುಳಸಿಕಟ್ಟೆಯಲ್ಲಿ ದೀಪಪ್ರಜ್ವಲನಗೈಯುತ್ತಿದ್ದಂತೆ, ದೇವಸ್ಥಾನದ ಹೊರಾಂಗಣ ,ಒಳಾಂಗಣದಲ್ಲಿ ಅಳವಡಿಸಲಾದ ಹಣತೆಯನ್ನು ಸೇರಿದ್ದ ಭಕ್ತಸಮೂಹ ಏಕಕಾಲದಲ್ಲಿ ಬೆಳಗಿಸಿದ್ದಾರೆ. ದೇವಾಲಯ ಪ್ರವೇಶಿಸುವ ದ್ವಾರದ ಮುಂಭಾಗ ಜೋಡಿಸಲಾದ ದೀಪದ ಓಂಕಾರ, ಗಣಪತಿ, ಶಂಖ, ಚಕ್ರ, ಗದಾ, ಪದ್ಮಾ, ಹಾಗೆನೆ ಒಳಾಂಗಣದಲ್ಲಿ ಪುಪ್ಪಾಲಂಕಾರ ವಿಶೇಷ ಗಮನಸೆಳೆಯಿತು. ಇನ್ನೂ ದೇವಾಲಯಕ್ಕೆ ನೂರಾರು ಭಕ್ತಾದಿಗಳು ಆಗಮಿಸಿ ವಿಶ್ವರೂಪದರ್ಶನ ಪಡೆದು ಪುನೀತರಾಗಿದ್ದಾರೆ.



