ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗಾಗಲೇ ಚಂದ್ರಯಾನ- 3ರಲ್ಲಿ ಯಶಸ್ವಿಯಾಗಿದ್ದು ಇಡೀ ವಿಶ್ವ ಬೆರಗಾಗುವಂತೆ ಮಾಡಿದೆ.
ಚಂದ್ರನ ಅಂಗಳದಲ್ಲಿ ರೋವರ್ ಪ್ರಗ್ಯಾನ್ ಅನ್ನು ಇಳಿಸಿ ಮಹತ್ವದ ಸಾಧನೆ ಮಾಡಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ಇಸ್ರೋ ಮತ್ತೊಂದು ಪ್ರಮುಖವಾದ ಯೋಜನೆ ಚಂದ್ರಯಾನ- 4ನ್ನು ಅನ್ನು ಉಡಾವಣೆ ಮಾಡುವ ಪ್ಲಾನ್ನಲ್ಲಿದೆ. ಆದ್ರೆ ಈ ಬಾರಿ ಚಂದ್ರನಿಂದ ಕಲ್ಲು, ಮಣ್ಣಿನ ಮಾದರಿಗಳನ್ನ ಭೂಮಿಗೆ ತರಬೇಕು ಎನ್ನುವ ಯೋಚನೆಯಲ್ಲಿದೆ.
ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ನ (SAC/ISRO) ನಿರ್ದೇಶಕ ನಿಲೇಶ್ ದೇಸಾಯಿ ಅವರು ಪುಣೆಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೊರಾಲಜಿಯ 62ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಚಂದ್ರನ ಅಂಗಳದಿಂದ ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ಗುರಿಯನ್ನು ಚಂದ್ರಯಾನ- 4 ಯೋಜನೆಯಲ್ಲಿನ ಪ್ರಮುಖ ಅಂಶವಾಗಿದೆ. ಚಂದ್ರಯಾನ-3 ಲ್ಯಾಂಡಿಂಗ್ ಆದಂತೆ ಚಂದ್ರಯಾನ- 4 ಕೂಡ ಲ್ಯಾಂಡ್ ಆಗಲಿದೆ. ಆದ್ರೆ ಕಕ್ಷೆಯ ಮಾಡ್ಯೂಲ್ ಅನ್ನು ಅಲ್ಲಿ ಲ್ಯಾಂಡ್ ಮಾಡಿದ ನಂತರ ಕೇಂದ್ರ ಘಟಕವೊಂದು ವಾಪಸ್ ಭೂಮಿಗೆ ಹಿಂತಿರುಗುತ್ತದೆ. ಅದು ಭೂಮಿಗೆ ಬರಬೇಕಾದರೆ ಮಣ್ಣಿನ ಮಾದರಿಗಳನ್ನು ಹೊತ್ತು ಬರುತ್ತದೆ. ಈ ವೇಳೆ ಅದು ಬರುವಾಗ ಹಂತ ಹಂತವಾಗಿ ಪ್ರತ್ಯೇಕಗೊಳ್ಳುತ್ತದೆ. ಇದು ಮಿಷನ್ನ ಅತ್ಯಂತ ಮಹತ್ವದ ಕಾರ್ಯವಾಗಿರುತ್ತದೆ. ಮುಂದಿನ 5 ರಿಂದ 7 ವರ್ಷಗಳಲ್ಲಿ ಈ ಯೋಜನೆ ಸಿದ್ಧವಾಗಲಿದೆ ಎಂದರು.
ಚಂದ್ರಯಾನ- 3ರಲ್ಲಿ ರೋವರ್ ಪ್ರಗ್ಯಾನ್ ಕೇವಲ 30 ಕೆ.ಜಿ ಮಾತ್ರ ಇತ್ತು. ಆದರೆ ಚಂದ್ರಯಾನ- 4ರಲ್ಲಿ ರೋವರ್ ಬರೋಬ್ಬರಿ 350 ಕೆ.ಜಿ ಇರಲಿದ್ದು ಇದನ್ನು ಚಂದ್ರನ ಮೇಲೆ ಇಳಿಸುವುದೇ ದೊಡ್ಡ ಸವಾಲು ಆಗಲಿದೆ. ಅಲ್ಲದೇ ಚಂದ್ರಯಾನ-3 ಯೋಜನೆ ಯಶಸ್ವಿಯಾದಂತೆ ಚಂದ್ರಯಾನ-4ರ ಯಶಸ್ಸು ಅದು ಭೂಮಿಗೆ ಹಿಂದಿರುಗುವಾಗ ಚಂದ್ರನ ಮೇಲ್ಮೈಯಿಂದ ಮಣ್ಣಿನ ಮಾದರಿಗಳನ್ನು ತರುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಇಸ್ರೋ ಹಾಗೂ ಜಪಾನಿನ ಬಾಹ್ಯಾಕಾಶ ಸಂಸ್ಥೆ JAXA ಲುಪೆಕ್ಸ್ ಯೋಜನೆಯಲ್ಲಿ ತೊಡಗಿಕೊಂಡಿವೆ. ಇದು ಕೂಡ ಚಂದ್ರನ ಅನ್ವೇಷಣೆ ಮಾಡುವ ಮಿಷನ್ ಆಗಿರಲಿದೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…