ಎರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ನಲ್ಲಿ ನಡೆದಿದೆ.
ಐಶ್ವರ್ಯ ರೈ ಮೃತಪಟ್ಟ ಯುವತಿ. ಐಶ್ವರ್ಯ ರೈ ಎರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದಳು. ಆದರೆ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಯುವಕನ ಕಡೆಯವರು ಕೆಳ ಜಾತಿಯವರು ಎಂಬ ಕಾರಣಕ್ಕೆ ಯುವತಿಯನ್ನು ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ. ಹೀಗಾಗಿ ಕೊಲೆಗೆ ಪ್ರಚೋದನೆ ಮಾಡಲಾಗಿದೆ ಅಂತ ಪೋಷಕರು ಆರೋಪ ಮಾಡಿದ್ದಾರೆ.
ಯುವತಿ ಐಶ್ವರ್ಯ ಅಶೋಕ್ ಕುಮಾರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ 7-8 ವರ್ಷಗಳಿಂದ ಪ್ರೀತಿಸುತ್ತಿದ್ದಳು. ನಮಗೂ ಅವರಿಗೂ ಹೊಂದಾಣಿಕೆಯಾಗೋಲ್ಲ. ನಾನು ಬೇಡ ಮಗಳೇ ಅಂತ ನನ್ನ ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವರ ಸಂಪ್ರದಾಯದಂತೆ ನಾವು ಮದುವೆ ಮಾಡಿಕೊಳ್ತೇವೆ ಎಂದು ಶಾಸ್ತ್ರಕ್ಕೆ ಕರ್ಕೊಂಡು ಹೋಗಿದ್ರು. ಹುಡುಗಿ ಕಡೆಯವರು ಯಾರೂ ಬರಬಾರದು ಅಂತ ಅವರು ಕಂಡಿಷನ್ ಹಾಕಿದ್ರು. ಹೀಗಾಗಿ, ನಾವು ಮಗಳ ಪ್ರೀತಿ ಮುಖ್ಯ ಅಂತ ಒಪ್ಪಿಕೊಂಡಿದ್ವಿ ಎಂದು ಐಶ್ವರ್ಯ ಪೋಷಕರು ಹೇಳಿದ್ದಾರೆ.
ಬಳಿಕ ನನಗೆ ಫೋನ್ ಮಾಡಿ, ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಅವರೇ, ಮೂರ್ನಾಲ್ಕು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ, ಆದ್ರೆ ಜೀವ ಉಳಿದಿಲ್ಲ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ, ಇದು ಸರಿಯಾಗಿ ತನಿಖೆಯಾಗಬೇಕಿದೆ ಎಂದು ಯುವತಿಯ ತಂದೆ ಆರೋಪ ಮಾಡಿದ್ದಾರೆ.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…