ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ವಿಠೋಬಾ ರುಕುಮಾಯಿ ದೇವಸ್ಥಾನ, ಶ್ರೀನಿವಾಸಪುರ, ಗುಂಡ್ಯಡ್ಕ, ಇಲ್ಲಿ ವಿಠೋಬ ಭಜನಾ ಮಂಡಳಿಯ 77ನೇ ವರ್ಷದ ಭಜನಾ ಸಪ್ತಾಹ ದಿನಾಂಕ 21 ನವಂಬರ್ 2023 ರಿಂದ ದಿನಾಂಕ 27 ನವಂಬರ್ 2023ರ ವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನಾಂಕ 21 ರಂದು ಆರಂಭವಾಗುವ ಭಜನಾ ಸಪ್ತಾಹವು ದಿನಾಂಕ 27ರಂದು ಸಮಾಪನಗೊಳ್ಳಲಿದ್ದು ದಿನಾಂಕ 27ರಂದು ನವಕ ಪ್ರಧಾನ ಹೋಮ, ಸಿಯಾಳ ಅಭಿಷೇಕ, ಕಳಶಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಅಲಂಕಾರ ಪೂಜೆ ನಂತರ ಮಹಾಪೂಜೆ ಬಳಿಕ ಮಹಾ ಅನ್ನಸಂಪರ್ಪಣೆ ನಡೆಯಲಿದ್ದು ಸಾಯಂಕಾಲ ದೀಪಾರಾಧನೆ, ಪಲ್ಲಕ್ಕಿ ಸೇವೆ, ಅಷ್ಟಾವಧಾನ ಸೇವೆ, ನಂತರ ಭಜನಾ ಸಪ್ತಾಹ ಮಂಗಳೋತ್ಸವ ಬಳಿಕ ಪ್ರಸಾದ ವಿತರಣೆ ಕಾರ್ಯಕ್ರಮವಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ವಿಠೋಬಾ ಭಜನಾ ಮಂಡಳಿ ಟ್ರಸ್ಟ್, ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಗುಂಡ್ಯಡ್ಕ, ಹಾಗೂ ವಿಠೋಬಾ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಆಮಂತ್ರಣ ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿನಾಂಕ 27.11.2023 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ರುಕ್ಮಿಣಿ ಪಾಂಡುರಂಗ ಸಭಾಭವನ ಶ್ರೀನಿವಾಸಪುರ ಗುಂಡ್ಯಕ್ಕ ಇಲ್ಲಿ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ ವಿಶೇಷ ಸಭೆಯು ನಡೆಯಲಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು, ಸಮಾಜದ ಮತ್ತು ಸಂಘದ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನ ಮತ್ತು ಅಭಿಪ್ರಾಯವನ್ನು ನೀಡುವಂತೆ, ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




