ಹಳೆಯಂಗಡಿ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇಲ್ಲಿ ರಂಗಪೂಜೆ, ಸರ್ವಸೇವೆ, ಭದ್ರದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮುಷ್ಠಿಕಾಣಿಕೆ ಸಮರ್ಪಣೆ ನೆರವೇರಿದೆ.

ತೋಕೂರು ಶ್ರೀ ಮದ್ದೇರಿ ದೈವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಸೇವೆಗಳು ನಡೆದಿದ್ದು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಶಿಬರೂರು ಇವರ ಪೌರೋಹಿತ್ಯದಲ್ಲಿ, ಪ್ರಧಾನ ಅರ್ಚಕರಾದ ಮಧುಸೂದನ ಆಚಾರ್ಯ ಉಪಸ್ಥಿತಿಯಲ್ಲಿ ಪೂಜಾ ಕಾರ್ಯ ಸಂಪನ್ನಗೊAಡಿದೆ. ಇನ್ನೂ ಪೂಜಾ ಕೈಂಕರ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಭಾಗಿಯಾಗಿದ್ರು.



