ಉಡುಪಿ:ಅಮೆರಿಕಾದ ಹೂಸ್ಟನ್ ಮಹಾನಗರದಲ್ಲಿರುವ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನದಲ್ಲಿ ೧೨ನೇಯ ವಾರ್ಷಿಕೋತ್ಸವ ವಿಜೃಂಭಣೆಯಿoದ ನಡೆಯಿತು.


ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು , ಶ್ರೀಕೃಷ್ಣದೇವರಿಗೆ ೧೦೮ ಪ್ರಸನ್ನ ಕಲಶಾಭಿಷೇಕ ಪೂಜೆಯನ್ನು ನೆರವೇರಿಸಿದ್ದು, ಬಳಿಕ ನೆರೆದ ಭಕ್ತರಿಗೆ ಮುದ್ರಾಧಾರಣೆ ಮಾಡಿದ್ದಾರೆ. ಸಂಜೆ ಗೋಧೂಳಿ ಲಗ್ನದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣಮಹೋತ್ಸವ ನಡೆಯಿತು.



