ಉಡುಪಿ:ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಜಿಲ್ಲಾಧಿಕಾರಿಯಾದ ಡಾ. ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಉಡುಪಿ ಪೊಲೀಸರಿಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಶಿವಮೊಗ್ಗ ಹಾಗೂ ಉಡುಪಿಯ ತಹಶೀಲ್ದಾರ್‌ಗಳಿಗೆ ಹಣ ಕಳುಹಿಸುವಂತೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೀಗ ತನಿಖೆ ನಡೆಸಿರುವ ಪೊಲೀಸರು ನಕಲಿ ಖಾತೆಯನ್ನು ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವ ಸೃಷ್ಠಿ ಮಾಡಿದ್ದಾನೆ ಎಂದು ಪತ್ತೆಹಚ್ಚಿದ್ದಾರೆ.



