ಗೋಡಂಬಿ ಅನೇಕ ಜನರು ತಿನ್ನಲು ಇಷ್ಟಪಡುವ ಬೀಜಗಳಲ್ಲಿ ಒಂದಾಗಿದೆ. ಗೋಡಂಬಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅವು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಭಾರತದಲ್ಲಿ ತಯಾರಾಗುವ ಹೆಚ್ಚಿನ ಸಿಹಿತಿಂಡಿಗಳಲ್ಲಿ ಸುವಾಸನೆಗಾಗಿ ಗೋಡಂಬಿಯನ್ನು ಸೇರಿಸಲಾಗುತ್ತದೆ.
ಗೋಡಂಬಿ ತಿನ್ನುವುದರಿಂದ ಹಸಿವು ನೀಗಿಸಿಕೊಳ್ಳಬಹುದಷ್ಟೇ ಅಲ್ಲದೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಪ್ರಯೋಜನಗಳಿವೆ. ಗೋಡಂಬಿ ತಿನ್ನುವುದರಿಂದ ಆರೋಗ್ಯದ ಮೇಲೆ ಏನೇನು ಲಾಭವಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ಗೋಡಂಬಿ ತೂಕ ಇಳಿಸಲು ಸಹಾಯ ಮಾಡುತ್ತದೆ ನಿತ್ಯ ಗೋಡಂಬಿಯನ್ನು ತಿನ್ನುವುದರಿಂದ ನೀವು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಗೋಡಂಬಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಇದು ಚಯಾಪಚಯವನ್ನು ವೇಗಗೊಳಿಸಲು ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ : ಗೋಡಂಬಿಯಲ್ಲಿ ಹೇರಳವಾದ ನಾರಿನಂಶವಿದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಗೋಡಂಬಿ ತಿಂದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಗೋಡಂಬಿಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
ಜ್ಞಾಪಕ ಶಕ್ತಿ ಸುಧಾರಣೆ : ಗೋಡಂಬಿಯಲ್ಲಿ ಮೆಗ್ನೀಸಿಯಮ್ ಕಂಡುಬರುತ್ತದೆ. ಮೆಗ್ನೀಸಿಯಮ್ ಸೇವನೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಜ್ಞಾಪಕಶಕ್ತಿ ಸಮಸ್ಯೆ ಇರುವವರು ಗೋಡಂಬಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಮೂಳೆಗಳಿಗೆ ಬಲ ವೃದ್ಧಿ : ಮೂಳೆಗಳನ್ನು ಬಲಪಡಿಸುವಲ್ಲಿ ಗೋಡಂಬಿ ತುಂಬಾ ಪರಿಣಾಮಕಾರಿಯಾಗಿದೆ. ಸೋಡಿಯಂ ಮತ್ತು ಕ್ಯಾಲ್ಸಿಯಂ ಮೂಳೆಗಳ ದೌರ್ಬಲ್ಯವನ್ನು ತೆಗೆದುಹಾಕಲು ಉಪಯುಕ್ತವಾಗಿದೆ.
ಕಾಂತಿಯುತ ಚರ್ಮ ನೀಡುತ್ತದೆ ಗೋಡಂಬಿ ನಿಮ್ಮ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ, ಏಕೆಂದರೆ ಇದರಲ್ಲಿ ತಾಮ್ರ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಗೋಡಂಬಿ ಬೀಜಗಳಿಂದ ತಯಾರಿಸಿದ ಎಣ್ಣೆಯು ನಿಮ್ಮ ಚರ್ಮಕ್ಕೆ ಉತ್ತಮವಾಗಿದೆ. ಸೆಲೆನಿಯಮ್, ಸತು, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕವು ಗೋಡಂಬಿ ಎಣ್ಣೆಯಲ್ಲಿ ಹೇರಳವಾಗಿದೆ.



