ಟೆಕ್ಸಾಸ್:ಇತ್ತೀಚೆಗೆ ಅಮೇರಿಕಾದ ಮಿಡ್‌ವೇ ಬಳಿಯ ಟೆಕ್ಸಾಸ್‌ನ ಪ್ಲಾನೋದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ.

ಆದರೆ ಈ ವಿಮಾನ ವಸತಿ ಪ್ರದೇಶದಲ್ಲಿ ಕುಸಿದು ಬಿದ್ದಿದ್ದರಿಂದ ಸ್ಥಳೀಯರು ಆತಂಕಗೊoಡಿದ್ದಾರೆ. ಏಕ-ಎಂಜಿನ್ ಮೂನಿ ಎಂ 20 ವಿಮಾನವು ಮಾಮಾಸ್ ಡಾಟರ್ಸ್ ಡೈನರ್‌ನ ಹೊರಾಂಗಣದಲ್ಲಿ ನಿನ್ನೆ ಪತನಗೊಂಡಿದೆ. ವಿಮಾನವು ರಸ್ತೆಯಲ್ಲಿ ಪತನಗೊಂಡು ಬೆಂಕಿ ಹೊತ್ತಿಕೊಂಡಿದ್ದು ವಿಮಾನದಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಕೆಲವೊಂದು ವಾಹನಗಳಿಗೆ ಬೆಂಕಿ ತಗುಲಿದ್ದು ಸಾರ್ವಜನಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಸಂಬoಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.



