ಮುಲ್ಕಿ : ಅಶೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಪದಾಧಿಕಾರಿಗಳು ಮಂಗಳವಾರದಂದು ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ಇಂಧೂ ಎಮ್. ಅವರನ್ನು ಭೇಟಿಯಾಗಿ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ಮಳೆ ನೀರು ಚರಂಡಿಯ ಭದ್ರತೆಯ ಬಗ್ಗೆ ಮನವಿ ಮಾಡಿದರು ಮತ್ತು ಮಳೆ ನೀರು ಚರಂಡಿ ಅಲ್ಲಲ್ಲಿ ಮುಚ್ಚದ ಹಾಗೆ ನೋಡಿಕೊಳ್ಳಬೇಕು, ಮಳೆ ನೀರು ಉತ್ತಮವಾಗಿ ಹೋಗುವ ವ್ಯವಸ್ಥೆ ಮಾಡಬೇಕು

ಕಟ್ಟಡ ಪರವಾನಿಗೆ ಮತ್ತು ಅಕ್ಯೂಪೆನ್ಸಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿಯೋ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಬೇಕು. ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಲ್ಲಿ ನಮ್ಮ ಸಹಕಾರವಿರುತ್ತದೆ ಎಂದು ಹೇಳಿದರು. ಅಶೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿಯ ಸ್ಥಾಪಕಾಧ್ಯಕ್ಷರಾದ ಜೀವನ್ ಕೆ. ಶೆಟ್ಟಿ, ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ಖಜಾಂಚಿ ವರುಣ್ ಮತ್ತು ನಗರ ಪಂಚಾಯತ್ ಅಭಿಯಂತರರಾದ ಅಶ್ವಿನಿಯವರು ಉಪಸ್ಥಿತರಿದ್ದರು.



