ಚಳಿಗಾಲ ಪ್ರಾರಂಭವಾದ ತಕ್ಷಣ ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ವರ್ಷವಿಡಿ ಸುಲಭವಾಗಿ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಮಿಟಮಿನ್‌ಗಳಿವೆ. ಪ್ರತಿದಿನ ಕ್ಯಾರೆಟ್ ಅಥವಾ ಅದರ ಜ್ಯೂಸ್ನನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದಂತೆ. ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕ್ಯಾರೆಟ್ ಸದಾ ಸಹಕಾರಿ. ಮುದುಕರಿಂದ ಮಕ್ಕಳ ವರೆಗೆ ಅಚ್ಚುಮೆಚ್ಚಿನ ತರಕಾರಿ ಕ್ಯಾರೆಟ್ ಬೆಳೆಯಲು ಸುಲಭ ಮತ್ತು ಆರೋಗ್ಯಕ್ಕೂ ಲಾಭದಾಯಕ. ಮಕ್ಕಳ ಆರೋಗ್ಯಕ್ಕಂತೂ ಕ್ಯಾರೆಟ್ ಬಹಳ ಅಗತ್ಯ.

1. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.
2. ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ.
3. ಜೀರ್ಣಕ್ರೀಯೆಯನ್ನು ವೃದ್ಧಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
ಕ್ಯಾರೆಟ್‍ನಲ್ಲಿರುವ ಅಧಿಕ ಡಯೆಟರಿ ಫೈಬರ್, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

4. ಕ್ಯಾರೆಟ್‌ನಲ್ಲಿ ಫೈಬರ್ ಹೇರಳವಾಗಿದ್ದು, ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದೆ. ಇದು ದೇಹದ ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡುತ್ತದೆ.
5. ಮುಖದ ಮೇಲೆ ಮೊಡವೆಗಳಿದ್ದರೆ, ಆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಕ್ಯಾರೆಟ್ ಜ್ಯೂಸ್ ನಿಮಗೆ ರಾಮಬಾಣವಾಗಿ ಪರಿಣಮಿಸಲಿದೆ. ಮುಖದ ಮೇಲಿನ ಹಳೇ ಮೊಡವೆ ಕಲೆಗಳು ಮಾಯವಾಗಬೇಕಾದರೆ, ಕ್ಯಾರೆಟ್ ಬಳಕೆ ಒಳ್ಳೆಯದು.
6. ಕೆಮ್ಮು ಕಾಣಿಸಿಕೊಂಡರೆ ಕ್ಯಾರೆಟ್ ಜ್ಯೂಸ್‌ಗೆ ಕರಿಮೆಣಸು ಮತ್ತು ಜೇನು ತುಪ್ಪ ಬೆರೆಸಿ ಕುಡಿದರೆ, ಕೆಲಹೊತ್ತಿನಲ್ಲಿ ಕೆಮ್ಮು ಮಾಯವಾಗಲಿದೆ.



