ಉಡುಪಿ:ಅಸಹಾಯಕ ಸ್ಥಿತಿಯಲ್ಲಿದ್ದ ಬಿಹಾರ ಮೂಲದ ಯುವತಿಯನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿದೆ.

ರೈಲು ನಿಲ್ದಾಣದಲ್ಲಿ ಯುವಕನೋರ್ವ ಯುವತಿಯೊಂದಿಗೆ ಸಮಯ ಕಳೆಯುತ್ತಿದ್ದು; ಸಂಶಯಾಸ್ಪದ ವರ್ತನೆ ಗಮನಿಸಿದ ರೈಲ್ವೆ ಆರ್.ಪಿ.ಎಫ್ ಪೋಲಿಸರು ವಿಚಾರಣೆಗೆ ತೆರಳಿದ್ದಾರೆ. ಈ ವೇಳೆ ಪೋಲಿಸರನ್ನು ಕಂಡು ಭೀತಿಗೊಳಗಾದ ಯುವಕ ಯುವತಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ವಿಚಾರಣೆ ವೇಳೆ ಯುವತಿಯು ಬಿಹಾರದಿಂದ ಮನೆ ಬಿಟ್ಟು ಬಂದಿರುವುದಾಗಿ ಹೇಳಿದ್ದಾಳೆ. ಆರ್ ಪಿ.ಎಫ್ ಪೋಲಿಸರು ಯುವತಿಯನ್ನು ರಕ್ಷಿಸಿ, ನಗರ ಮಹಿಳಾ ಪೋಲಿಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್ ಪಿ ಎಫ್ ಅಧಿಕಾರಿಗಳಾದ ಸುಧೀರ್ ಶೆಟ್ಟಿ, ಲಕ್ಷ್ಮಣ್ ಭಾಗಿಯಾಗಿದ್ದರು. ಈ ವೇಳೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ಸಹಕರಿಸಿದ್ದಾರೆ.



