ಮುಲ್ಕಿ: ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ ಮಹಾಸಭೆಯು ಶಾಫಿ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ, ಸುಹೈಲ್ ಹೈದರ್ ರವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪುತ್ತುಭಾವ ಕಾರ್ನಾಡು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ ಕೆ ಹಸೈನಾ ದರ್ಗಾ ರೋಡ್ ರವರನ್ನು ಆಯ್ಕೆ ಮಾಡಲಾಯಿತು ಹಾಗೂ 23 ಸದಸ್ಯರನ್ನು ಆಯ್ಕೆ ಮಾಡಲಾಯಿತು..

47ನೇ ವರ್ಷದ ದಫ್ ರಾತೀಬ್ ಸಮಾರಂಭವನ್ನು 2024 ರ ಫೆಬ್ರವರಿ 1 ರಿಂದ 3ರ ವರೆಗೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಫಾರೂಕ್ ಹಾಜಿ ಹಾಗೂ ಕಾರ್ನಾಡು ಮದರಸದ ಸದರ್ ಉಸ್ತಾದ್ ಬಹುಮಾನ್ಯ ರಝಾಕ್ ಮದನಿಯವರು ಉಪಸ್ಥಿತರಿದ್ದರು.



