ಮೂಲ್ಕಿ: ಪಾವಂಜೆ ಮೇಳದ 2023-24 ನೇ ವರ್ಷದ ತಿರುಗಾಟ ದೇವಸ್ಥಾನದಲ್ಲಿ ಕಲಾವಿದರಿಗೆ ಗೆಜ್ಜೆ ಹಸ್ತಾಂತರದ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭ ದೇವಸ್ಥಾನದ ಆಡಳಿತ ಮುಕ್ತೇಸರ ಶಶೀಂದ್ರ ಕುಮಾರ್, ಧರ್ಮದರ್ಶಿ ಡಾ.ಯಾಜಿ ಎಚ್ ನಿರಂಜನ ಭಟ್, ಸಂಚಾಲಕರಾದ ಪಟ್ಲ ಸತೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಐಕಳ ಹರೀಶ್ ಶೆಟ್ಟಿ, ಸುದೇಶ್ ಕುಮಾರ್ ರೈ, ಅಡ್ಯಾರ್ ಪುರುಶೋತ್ತಮ ಭಂಡಾರಿ, ಮಹಾವೀರ್ ಪಾಂಡ್ಯ, ಎಂ. ಎಲ್. ಸಾಮುಗ, ಸುಧಾಕರ ಪೂಂಜ, ವಿಜಯ ಶೆಟ್ಟಿ ಕಾರ್ಕಳ, ಆರತಿ ಆಳ್ವಾ, ಬಾಳ ಜಗನ್ನಾಥ ಶೆಟ್ಟಿ, ಗಿರೀಶ್ ಎಂ. ಶೆಟ್ಟಿ ಕಟೀಲು, ಪೂರ್ಣಿಮಾ ಶಾಸ್ತ್ರಿ , ಸುಜಾತ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.







