ಉಡುಪಿ:ದೀಪಾವಳಿ ಮುಗಿಯುತ್ತಿದ್ದಂತೆ ದೇವಾಲಯಗಳ ನಗರಿ ಉಡುಪಿಯಲ್ಲೀಗ ದೀಪೋತ್ಸವಗಳ ಸಂಭ್ರಮ.


ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವಗಳನ್ನು ಕಾಣುವುದೇ ಒಂದು ಹಬ್ಬ. ಅದರಲ್ಲೂ ನಸುಕಿನ ಜಾವ ನಡೆಯುವ ವಿಶ್ವರೂಪ ದರ್ಶನ ಒಂದು ಅಪರೂಪದ ಆಚರಣೆ. ಉಡುಪಿಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ನಡೆದ ವಿಶ್ವರೂಪ ದರ್ಶನದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ರು. ಮುಂಜಾನೆ ಐದು ಗಂಟೆ ಸುಮಾರಿಗೆ ಸಾವಿರಾರು ಹಣತೆಗಳನ್ನು ಬೆಳಗುವ ಮೂಲಕ ಹಬ್ಬ ಆಚರಿಸಲಾಗಿದ್ದು, ಈ ವೇಳೆ ನಾನಾ ಬಗೆಯ ರಂಗವಲ್ಲಿಗಳು ಗಮನಸೆಳೆದವು. ಓಂ ನಮ ಶಿವಾಯ, ಜೈಶ್ರೀರಾಮ್, ಮಹಾಗಣಪತಿ, ಉಡುಪಿ ಕೃಷ್ಣ, ಮುಂತಾದ ರಂಗವಲ್ಲಿಗಳು ಆಕರ್ಷಕವಾಗಿತ್ತು. ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದಿದ್ದು, ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.



