ಬಂಟ್ವಾಳ:ಬoಟ್ವಾಳದ ನಂದನಹಿತ್ಲು ಶ್ರೀ ವೈದ್ಯನಾಥ ,ಅರಸು,ಜುಮಾದಿಬಂಟ ದೈವಸ್ಥಾನಕ್ಕೆ ನೂತನ ಧ್ವಜ ಸ್ತಂಭ ಸಮರ್ಪಣೆಯ ಹಿನ್ನಲೆಯಲ್ಲಿ ಬಂಟ್ವಾಳ ತ್ಯಾಗರಾಜರಸ್ತೆಯಲ್ಲಿ ಗುರುತಿಸಲಾದ ವೃಕ್ಷದ ಛೇಧಕ್ಕೆ ಸ್ಥಳದಲ್ಲಿ ಮುಹೂರ್ತಪೂಜಾ ವಿಧಿ ವಿಧಾನವನ್ನು ನಡೆಸಲಾಯಿತು.


ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ನೇತೃತ್ವದಲ್ಲಿ ವೃಕ್ಷಕ್ಕೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದೆ. ಇದೇ ವೇಳೆ ಮರ ಕತ್ತರಿಸುವುದು ಸಹಿತ ಮುಂದಿನ ಪ್ರಕ್ರಿಯೆಗೆ ವಿಶ್ವಕರ್ಮರಿಗೆ ವೀಳ್ಯ ನೀಡಲಾಯಿತು. ಇನ್ನು ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಬಾಳಿಗಾ ಮನೆತನದ ಬಿ. ಸುಧೀರ್ ಬಾಳಿಗಾ, ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು, ಸಂಜೀವ ಪೂಜಾರಿ ಪೆಲತ್ತಿಮಾರು, ಲೋಕೇಶ್ ಬಂಗೇರ ಗಾಣದಪಡ್ಪು,ಲೋಕನಾಥ ಪೂಜಾರಿ ಬಡಕೊಟ್ಟು, ಧ್ವಜಸ್ತಂಭಕ್ಕಾಗಿ ಮರವನ್ನು ಉಚಿತವಾಗಿ ದಾನಗೈದ ಅವಿನಾಶ್ ಕಾಮತ್, ಶಿಲ್ಪಿ ಸದಾಶಿವ ಶೆಣೈ, ಮತ್ತಿತರರು ಉಪಸ್ಥಿತರಿದ್ದರು.



