ಮುಲ್ಕಿ:ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಷಷ್ಠಿ ಮಹೋತ್ಸವದ ಪೂರ್ವಭಾವಿಯಾಗಿ ಗ್ರಾಮಸ್ಥರ ಮತ್ತು ಸಂಘ-ಸoಸ್ಥೆಗಳ ವತಿಯಿಂದ ದೇವಾಲಯದ ಪರಿಸರದ ಸ್ವಚ್ಛತಾ ಶ್ರಮದಾನಕ್ಕೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಚಾಲನೆಯನ್ನ ನೀಡಿದರು.


ಇನ್ನು ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಧುಸೂದನ್ ಆಚಾರ್, ಪುರುಷೋತ್ತಮ ರಾವ್, ವಿಜಯ್ ಕುಮಾರ್ ರೈ, ಯೋಗೀಶ್ ಕೋಟ್ಯಾನ್, ವಿಪುಲ ಡಿ. ಶೆಟ್ಟಿಗಾರ್, ಪಡು ಪಣಂಬೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಹೇಮನಾಥ ಆಮೀನ್, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್, ಪ್ರಮೀಳಾ ಡಿ. ಶೆಟ್ಟಿ , ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು , ದೇವಾಲಯದ ಸಿಬ್ಬಂದಿ ವರ್ಗ ಹಾಗು ಭಕ್ತರು ಉಪಸ್ಥಿತರಿದ್ದರು.



