ಉಡುಪಿ:ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮುನ್ನೂರಕ್ಕೂ ಅಧಿಕ ಶಿಷ್ಯರು ಭಕ್ತರೊಂದಿಗೆ ಉಡುಪಿ ಕೃಷ್ಣಮಠದಿಂದ ನೀಲಾವರ ಗೋಶಾಲೆಗೆ ಪಾದಯಾತ್ರೆ ನಡೆಸಿದ್ದಾರೆ.


ಕೃಷ್ಣಮಠದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಆರಂಭಿಸಿದ ಪೇಜಾವರ ಶ್ರೀಗಳು, ತನ್ನ ಏಳನೇ ವರ್ಷದ ಪಾದಯಾತ್ರೆಯನ್ನು ಯಶ್ವಸಿಯಾಗಿ ಪೂರ್ಣಗೊಳಿಸಿದ್ದಾರೆ. ಬಳಿಕ ಮಾತನಾಡಿದ ಶ್ರೀಗಳು, ನಮ್ಮ ಜೀವನವೂ ತಪಸ್ಸಾಗಬೇಕು. ಹಾಗಾಗ ಬೇಕಾದರೆ ಕೇವಲ ನಮ್ಮ ಹಿತಕ್ಕಾಗಿ ಮಾತ್ರವಲ್ಲದೇ ಪರರ ಹಿತದ ಬಗ್ಗೆಯೂ ಚಿಂತಿಸಿ ಶ್ರಮಿಸಲು ಯತ್ನಿಸಬೇಕು. ಅಂಥ ಮನಸ್ಥಿತಿ ನಮ್ಮದಾಗಲು ಸಾತ್ವಿಕ ಚಿಂತನೆ ಸಾತ್ವಿಕ ಕಾರ್ಯಗಳಲ್ಲಿ ಪ್ರವೃತ್ತಿ, ಭಗವಂತನಲ್ಲಿ ಭಕ್ತಿ ಬೇಕು ಎಂದ್ರು.



