ಕಾಸರಗೋಡು:ಕುಂಬಡಾಜೆ ಬಂಟರ ಸಂಘದ ವತಿಯಿಂದ ಇದೇ ಬರುವ ಡಿ. 02 ಮತ್ತು ಡಿ 03 ರಂದು ಬದಿಯಡ್ಕದ ಬೋಳುಕಟ್ಟೆಯಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಂಡಿದೆ.

ಕಾಸರಗೋಡು:ಕುಂಬಡಾಜೆ ಬಂಟರ ಸಂಘದ ವತಿಯಿಂದ ಇದೇ ಬರುವ ಡಿ. 02 ಮತ್ತು ಡಿ 03 ರಂದು ಬದಿಯಡ್ಕದ ಬೋಳುಕಟ್ಟೆಯಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಂಡಿದೆ. ಪಂದ್ಯಾಟದ ಲಾಂಛನ ಬಿಡುಗಡೆ ಕಾರ್ಯಕ್ರಮವು ಬಂಟರ ಸಂಘದ ಜಿಲ್ಲಾ ಸಮಿತಿ ಸದಸ್ಯರು, ಹಿರಿಯರಾದ ಸಂಜೀವ ಶೆಟ್ಟಿ ಮೊಟ್ಟೆಕುಂಜ ಇವರ ನಿವಾಸದಲ್ಲಿ ನಡೆದಿದ್ದು, ಲಾಂಛನವನ್ನ ಬೆಳ್ಳೂರು ಸಹಕಾರಿ ಬ್ಯಾಂಕ್ ಇದರ ಉಪಾಧ್ಯಕ್ಷರಾದ ಜಯರಾಜ್ ರೈ ಎಡಮುಗೇರು ಗುತ್ತು ಅವರು ಬಿಡುಗಡೆಗೊಳಿಸಿ ಶುಭಹಾರೈಸಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಜತೆಕಾರ್ಯದರ್ಶಿ ಹಾಗೂ ಮಾತೃ ಸಂಘದ ಕಾರ್ಯಕಾರೀ ಸಮಿತಿ ಸದಸ್ಯರಾದ ಕಿರಣ್ ಮಾಡ, ಕಾರಡ್ಕ ಬಂಟರ ಸಂಘದ ಅಧ್ಯಕ್ಷರಾದ ದೇವಾನಂದ ಶೆಟ್ಟಿ , ಕುಂಬಡಾಜೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ರೈ ಗಾಡಿಗುಡ್ಡೆ , ಕುಂಬಳೆ ಫಿರ್ಕಾ ಸಮಿತಿಯ ಕಾರ್ಯದರ್ಶಿಯಾದ ಸುರೇಶ್ ಶೆಟ್ಟಿ ಮೊಟ್ಟೆಕುಂಜ, ಕ್ರಿಕೆಟ್ ಪಂದ್ಯಾಟದ ಸಂಚಾಲಕರಾದ ಸಂತೋಷ್ ರೈ ಪುತ್ರಕಳ, ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಅಮೃತ್ ರಾಜ್ ರೈ ಮರತ್ತಿಲ, ಸಮಿತಿ ಉಪಾದ್ಯಕ್ಷರಾದ ಹರ್ಷ ರೈ ಬೆಳಿಂಜ, ವಸಂತ ಶೆಟ್ಟಿ, ಪ್ರಜ್ವಲ್ ಉಪಸ್ಥಿತರಿದ್ದರು.



