ಇಂಡಿಯಾ-ಆಸ್ಟ್ರೇಲಿಯಾ ಮೂರನೇ ಟಿ-20 ಪಂದ್ಯಕ್ಕೆ ಗುವಾಹಟಿ ಮೈದಾನ ಅಣಿಯಾಗಿದೆ. ಇಂದು ಸಂಜೆ 7 ಗಂಟೆಯಿಂದ ಪಂದ್ಯ ಆರಂಭವಾಗಲಿದ್ದು, ಇವತ್ತು ಗೆದ್ದರೆ ದ್ವಿಪಕ್ಷೀಯ ಟಿ-20 ಟ್ರೋಫಿ ಭಾರತಕ್ಕೆ ದಕ್ಕಲಿದೆ.

ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿದೆ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ-20ಯಲ್ಲಿ ಮುಖಭಂಗ ಅನುಭವಿಸಿರುವ ಆಸ್ಟ್ರೇಲಿಯಾ, ಗೆಲುವಿನ ಹುಡುಕಾಟದಲ್ಲಿದೆ. ಹೀಗಾಗಿ ಇವತ್ತಿನ ಪಂದ್ಯ ಆಸ್ಟ್ರೇಲಿಯಾ ಪಾಲಿಗೂ ಪ್ರತಿಷ್ಠೆಯಾಗಿದೆ.
ಟೀಂ ಇಂಡಿಯಾ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಅರ್ಷ್ದೀಪ್ ಸಿಂಗ್, ಮುಕೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ
ಟೀಂ ಆಸ್ಟ್ರೇಲಿಯಾ: ಮೆಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಷ್, ಗ್ಲೇನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯ್ನಿಸ್, ಟಿಮ್ ಡೆವಿಡ್, ಮ್ಯಾಥ್ಯೂ ವದೆ (ವಿಕೆಟ್ ಕೀಪರ್ / ಕ್ಯಾಪ್ಟನ್), ಸೀನ್ ಅಬ್ಬೊಟ್, ನ್ಯಾಥನ್ ಎಲ್ಲಿಸ್, ಆ್ಯಡಂ ಜಂಪಾ, ಜಸನ್/ ಸಂಗಾ



