ರಾಜ್ಯದಲ್ಲಿ ಪ್ರತಿನಿತ್ಯ ಸರಬರಾಜು ಆಗುತ್ತಿರುವ ಬಹುತೇಕ ಹಾಲು ಕಲಬೆರಕೆ ಎಂಬ ಆಘಾತಕಾರಿ ಮಾಹಿತಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ತಪಾಸಣೆಯಲ್ಲಿ ಬಹಿರಂಗವಾಗಿದೆ.
ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಹಾಲು ಕಲಬೆರಕೆ ಇರೋದು ದೃಢಪಟ್ಟಿತ್ತು. ಹೀಗಾಗಿ ಇಡೀ ರಾಜ್ಯದಾದ್ಯಂತ ಖಾಸಗಿ ಕಂಪನಿಗಳ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ ಹಾಲು ಪರೀಕ್ಷೆ ಮಾಡಲಾಗಿ, ಈ ವೇಳೆ ವಿಷಕಾರಿ ಅಂಶ ಪತ್ತೆಯಾಗಿದೆ.
ರಾಜ್ಯದಲ್ಲಿ ನಡೆದ 44 ಹಾಲಿ ಬ್ರ್ಯಾಂಡ್ಗಳ 259 ಹಾಲಿನ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಹಾಲಿನ ಗುಣಮಟ್ಟದ ಪರೀಕ್ಷೆಯಿಂದ ಬೆಚ್ಚಿಬೀಳುವ ವಿಚಾರ ಬಹಿರಂಗ ಆಗಿದೆ. ಸೇವಿಸಲು ಯೋಗ್ಯವಲ್ಲದ ವಿಷಯುಕ್ತ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಎಫ್ಎಸ್ಎಸ್ಎಐ (ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ)ನ ಮಾನದಂಡಕ್ಕಿಂತ ಕಡಿಮೆ ಮಾನದಂಡದ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಹಾಲಿನಲ್ಲಿ ಶೇಕಡಾ 4.63 ರಷ್ಟು ಕಲಬೆರಕೆ ಇದ್ದರೆ, ಶೇಕಡಾ 42.47 ರಷ್ಟು ಹಾಲು ಎಫ್ಎಸ್ಎಸ್ಎಐ ಮಾನದಂಡಕ್ಕಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ.
ಆದಿತ್ಯ, ಆರೋಗ್ಯ, ದೊಡ್ಲ, ಶ್ರೀಕೃಷ್ಣ ತಿರುಮಲ, ಕೃಷ್ಣಾ ಡೇರಿ ಸೇರಿದಂತೆ ಅನೇಕ ಮಾದರಿಯ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆ ವೇಳೆ ಹಾಲಿನಲ್ಲಿ ಆರೋಗ್ಯ ಹಾಳು ಮಾಡುವ ವಿಷಕಾರಿ ಅಂಶ ಪತ್ತೆಯಾಗಿದೆ. ಮಾಲ್ಟೊಡೆಕ್ಸ್ಟ್ರಿನ್ (maltodextrin), ಅಫ್ಲಾಟಾಕ್ಸಿನ್ (Aflatoxin) ಅಂಶಗಳು ಇರೋದು ಪತ್ತೆಯಾಗಿವೆ. ಹಾಲಿನ ಜೀವಿತಾವಧಿ ಹೆಚ್ಚಿಸಲು ಸೋಡಿಯಂ, ಸಕ್ಕರೆ, ಉಪ್ಪು ಬಳಕೆ ಮಾಡಲಾಗುತ್ತಿದೆ ಅನ್ನೋ ವಿಚಾರ ಬಯಲಾಗಿದೆ.
ಮಾಲ್ಟೊಡೆಕ್ಸ್ಟ್ರಿನ್: ಇದನ್ನು ಆಹಾರದಲ್ಲಿ ಬಳಸುತ್ತಾರೆ, ಆದರೆ ಹಾಲಿನಲ್ಲಿ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಲಿನ ಜೀವಿತಾವಧಿ ಹೆಚ್ಚಿಸಲು ಮಾಲ್ಟೊಡೆಕ್ಸ್ಟ್ರಿನ್ ಬಳಕೆ ಮಾಡಲಾಗುತ್ತದೆ. ಇದರ ಬಳಕೆಯಿಂದ ಅಲರ್ಜಿ, ಹೊಟ್ಟೆಯ ಸಮಸ್ಯೆಗಳು, ವಾಂತಿ, ಗ್ಯಾಸ್ಸ್ಟ್ರಿಕ್ ಆಗಲಿದೆ. ಮೇದೋಜೀರಕ ಗ್ರಂಥಿಯ ಮೇಲೆ ವ್ಯತಿರಿಕ್ತ ಪರಿಣಾಮ, ಮಧುಮೇಹ ಹೆಚ್ಚಾಗುವ ಸಾಧ್ಯತೆ ಇದೆ.
ಅಫ್ಲಾಟಾಕ್ಸಿನ್: ಪ್ರಾಣಿಗಳಿಗೆ ನೀಡುವ ಅಹಾರದಿಂದ ಹಾಲಿನಲ್ಲಿ ಬರಬಹುದು. ಅಫ್ಲಾಟಾಕ್ಸಿನ್ ಮನುಷ್ಯನ ದೇಹ ಸೇರಿದರೆ ವಾಕರಿಕೆ, ವಾಂತಿ, ಹೊಟ್ಟೆನೋವು, ಸ್ನಾಯು ಸೆಳೆತ, ಯಕೃತ್ತಿನಲ್ಲಿ ಹುಣ್ಣು, ಬೆಳವಣಿಗೆ ಕುಂಠಿತ, ಸಿರೋಸಿಸ್ ಅಲ್ಲದೇ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಅಹ್ವಾನ ನೀಡಬಲ್ಲದು. ಇನ್ನು ಉಪ್ಪು ಸಕ್ಕರೆ ಸೋಡಿಯಂ ಸೋಡಾದಿಂದ ಆಗುವ ಪರಿಣಾಮ ಎಲ್ಲರಿಗೂ ಗೊತ್ತಿರುವ ವಿಚಾರ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…