ಜನ ಮನದ ನಾಡಿ ಮಿಡಿತ

Advertisement

ಡಿಸೆಂಬರ್ .03 ಆಳ್ವಾಸ್ ನಲ್ಲಿ ನಾಯಿಮರಿ ನಾಟಕ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ಮೂಡುಬಿದ್ರೆ ಆಶ್ರಯದಲ್ಲಿ
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ ನಾಯಿಮರಿ ನಾಟಕ ಪ್ರದರ್ಶನವನ್ನು ಡಿ.03 ರಂದು ಸಂಜೆ 6.30 ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.


ಈಗಾಗಲೇ ರಾಜ್ಯಾದ್ಯಂತ 50 ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡ ಆಳ್ವಾಸ್ ಅಭಿನಯದ ಈ ಪ್ರಸಿದ್ದ ಮಕ್ಕಳ ನಾಟಕವನ್ನು ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ವೈದೇಹಿಯವರು ರಚಿಸಿದ್ದಾರೆ. ರಂಗಮಾಂತ್ರಿಕ ಡಾ.ಜೀವನ್ ರಾಂ ಸುಳ್ಯ ರವರು ನಿರ್ದೇಶಿಸಿದ್ದಾರೆ. ಮಾ| ಮನುಜ ನೇಹಿಗ, ಸುಮನಾ ಪ್ರಸಾದ್ , ಸತ್ಯಜಿತ್ ಹಾಗೂ ಗೀತಂ ಗಿರೀಶ್ ಸಂಗೀತ ನೀಡಿದ್ದಾರೆ.


ಸರಳವಾದ ಅಷ್ಟೇ ರಂಜನೀಯ ಅಂಶಗಳಿಂದ ಕೂಡಿದ ಈ ನಾಯಿಮರಿ ನಾಟಕವು ಸಮರ್ಥ ನಿರ್ದೇಶನ, ನವಿರು ಹಾಸ್ಯ, ಪರಿಣಾಮಕಾರಿ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಪ್ರತಿಕ್ಷಣವೂ ಹಿಡಿದಿಟ್ಟುಕೊಳ್ಳುವಂತಹ ಪ್ರಯೋಗವಾಗಿದೆ.
ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಂದೇಶ ಸಾರುವ ಈ ನಾಟಕವು ಪ್ರತಿಯೊಬ್ಬ ಮಕ್ಕಳೂ ನೋಡಬೇಕಾದ ಪ್ರಯೋಗವಾಗಿದೆ.ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ನೇರವಾಗಿ 6.30 ಕ್ಕೆ ನಾಟಕ ಆರಂಭವಾಗುತ್ತದೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!