ವಿಟ್ಲ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ರಿ ಮಂಗಳೂರು; ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಸಮೀಪದ ಅಳಿಕೆ ಗ್ರಾಮದಲ್ಲಿ ಯಕ್ಷಗಾನ ನೇಪಥ್ಯ ಕಲಾವಿದ ಚಂದ್ರಶೇಖರ ಕುಲಾಲ್ ರವರಿಗೆ ಕಟ್ಟಿ ಕೊಟ್ಟ ನೂತನ ಮನೆಯ ಹಸ್ತಾಂತರ ಮತ್ತು ಗೃಹಪ್ರವೇಶ ಕಾರ್ಯಕ್ರಮ ನಡೆಯಿತು.

ಗೃಹ ನಿರ್ಮಾಣದ ಕೊಡುಗೈ ದಾನಿ ಟಿ. ಶ್ಯಾಮ್ ಭಟ್ ಅವರ ಪರವಾಗಿ ಹನುಮಗಿರಿ ಮೇಳದ ಪ್ರಬಂಧಕರಾದ ಹರೀಶ್ ಬೊಳಂತಿಮೊಗೆರು ಇವರ ಕೈಯಲ್ಲಿ ಮನೆಯ ಕೀಲಿಕೈಯನ್ನ ಕಲಾವಿದನಿಗೆ ಹಸ್ತಅಂತರಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರೀಯ ಸಮಿತಿಯ ಸುದೇಶ್ ಕುಮಾರ್ ರೈ , ಬಾಳ ಜಗನ್ನಾಥ ಶೆಟ್ಟಿ, ರವಿಚಂದ್ರ ಶೆಟ್ಟಿ ಅಶೋಕನಗರ, ವಿಟ್ಲ ಘಟಕದ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.



