ಹಿಂದೂ ಧರ್ಮದಲ್ಲಿ ಗೊಂದಲಗಳಿದ್ದು, ಸ್ವಧರ್ಮಿಯರಿಂದಲೇ ಚಿಂತೆ ಕಾಡುವಂತಾಗಿದೆ. ಈ ನಿಟ್ಟಿನಲ್ಲಿ ಧರ್ಮ- ಧಾರ್ಮಿಕ ಆಚರಣೆಯೊಂದಿಗೆ ಪ್ರತಿಯೊಬ್ಬ ಹಿಂದೂ ಬೆರೆಯಬೇಕಾದ ಅಗತ್ಯವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

ಇವರು ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸಭಾಮಂದಿರದಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ವಿವಿಧ ತಾಲೂಕುಗಳಿಗೆ ಕಳುಹಿಸಿಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ್ದಾರೆ. ಹಿಂದೂ ಧರ್ಮದಲ್ಲಿ ಮಂತ್ರಾಕ್ಷತೆಗೆ ಬಹಳ ಮಹತ್ವವಿದೆ. ಇದೀಗ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ಪ್ರತಿಯೊಬ್ಬ ಹಿಂದೂ ಮನೆಗೆ ತಲುಪಿಸಿ, ಶ್ರೀರಾಮ ಕೈಂಕರ್ಯದಲ್ಲಿ ತೊಡಗಿಕೊಂಡಲ್ಲಿ ಶ್ರೀರಾಮನ ಪುನರ್ ಪ್ರತಿಷ್ಠೆಗೆ ಅರ್ಥ ಬರುವ ಜತೆಗೆ ಹಿಂದೂ ಧರ್ಮ ಉಜ್ವಲಿಸುತ್ತದೆ ಎಂದು ನುಡಿದಿದ್ದಾರೆ.