ಕಟೀಲು : ಹಿಮಾಲಯದಲ್ಲಿ ಹುಟ್ಟಿದ ನೀರು ರೈತನ ಗದ್ದೆಗೆ ಹರಿದು ಫಲ ಕೊಡುವಂತೆ, ಬಾಷೆಯ ಉಪಯೋಗ ಉತ್ತಮವಾಗಿರಲಿ ಎಂದು ಕೆ. ಪಿ. ರಾವ್ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಟೀಲು ಪದವಿ ಕಾಲೇಜಿನಿಂದ ಸಮ್ಮೇಳನ ನಡೆಯುವ ಪದವಿ ಪೂರ್ವ ಕಾಲೇಜಿನವರೆಗೆ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ಭಗವತ್ ಗೀತೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬಂದು ವಿಶೇಷ ಗೌರವ ಸಲ್ಲಿಸಲಾಯಿತು. ವಿವಿಧ ವೇಷಗಳು, ವಿದ್ಯಾರ್ಥಿಗಳು ಮೆರವಣಿಗೆಗೆ ಸಾಥ್ ನೀಡಿದರು.
ಹಳೆವಿದ್ಯಾರ್ಥಿ ಶೇಖರ ಪೂಜಾರಿ ಮೆರವಣಿಗೆಯನ್ನು ಉದ್ಘಾಟಿಸಿದರು. ಜನಪದ ವಸ್ತುಸಂಗ್ರಹಾಲಯವನ್ನು ಆನಂದ ಸಿ ಕುಂದರ್ ಉದ್ಘಾಸಿದರು, ಕಾರ್ಯಕ್ರಮದಲ್ಲಿ ಸಾಹಿತಿ ಪಾದೆಕಲ್ಲು ವಿಷ್ಣು ಭಟ್, ಪವನಜ. ದೇವಳದ ಆಡಳಿತ ಮಂಡಳಿ ಅಧ್ಯಕ್ಣ ಸನತ್ ಕುಮಾರಗ ಶೆಟ್ಟಿ, ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಾದ ಲೋಕಯ್ಯ ಸಾಲಿಯಾನ್, ಕಿರಣ್ ಕುಮಾರ್ ಶೆಟ್ಟಿ, ಗ್ರೆಗರಿನ್ ತಾವ್ರೋ, ಉಪಾಧ್ಯಕ್ಷರುಗಳಾದ ಭಾರತಿ, ಸುರೇಶ್, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.


ಪದವಿ ಕಾಲೇಜಿನ ಪ್ರಾಂಶುಪಾಲ ಕೃಪ್ಣ ಕಾಂಚಾನ್, ಪದವೀ ಪೂರ್ವ ಕಾಲೇಜಿನ ಪ್ರಾಂಶುಪಾಲ ಕುಸುಮಾವತಿ, ಪ್ರಾರ್ಥಮಿಕ ಶಾಲೆಯ ಮುಖ್ಯೋಪದ್ಯಾನಿ ಸರೋಜಿನಿ, ಅಂಗ್ಲ ಮಾದ್ಯಮ ಶಾಲೆಯ ಮುಖೋಪದ್ಯಾಯ ಚಂದ್ರಶೀಖರ ಭಟ್, ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ, ಡಾ.ಕೃಷ್ಣ ಧನ್ಯವಾದ ಸಮರ್ಪಿಸಿದರು. ಉಪಪ್ರಾಶುಂಪಾಲ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.



