ಜನ ಮನದ ನಾಡಿ ಮಿಡಿತ

Advertisement

ಲಯನ್ಸ್ ಸೇವಾ ಮಂದಿರದಲ್ಲಿ ಬಿಎಂಎಸ್ ರಿಕ್ಷಾ ಚಾಲಕ‌ & ಮಾಲಕರ ಸಂಘ ತಾಲೂಕು ಸಮಿತಿ ಬಂಟ್ವಾಳ ಇದರ 35 ನೇ ಮಹಾ ಸಭೆ

ಬಂಟ್ವಾಳ: ಬಿಎಂಎಸ್ ರಿಕ್ಷಾ ಚಾಲಕ‌ & ಮಾಲಕರ ಸಂಘ ತಾಲೂಕು ಸಮಿತಿ ಬಂಟ್ವಾಳ ಇದರ 35 ನೇ ಮಹಾ ಸಭೆ ಲಯನ್ಸ್ ಸೇವಾ ಮಂದಿರದಲ್ಲಿ ಇಂದು ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಾದೇಶಿಕ ಸಾರಿಕೆ ಅಧಿಕಾರಿ ಚರಣ್ ಅವರು ಮಾತನಾಡಿ, ಕಾನೂನು ವ್ಯಾಪ್ತಿಯನ್ನು ಮೀರದೆ, ವೃತ್ತಿಯನ್ನು ಪ್ರೀತಿಸಿ ಎಂದು ಅವರು ಹೇಳಿದರು. ಸಂಘಟನೆಯ ಮೂಲಕ ಸಂಘಟಿತರಾಗಿ, ಸಾರ್ವಜನಿಕ ಸೇವೆಯ ಮೂಲಕ ಇತರರಿಗೆ ಮಾದರಿಯಾಗಿ ಎಂದು ಅವರು ತಿಳಿಸಿದರು.


ಮುಖ್ಯ ಅತಿಥಿಯಾಗಿದ್ದ ಟ್ರಾಫಿಕ್ ಪೋಲಿಸ್ ಸಭ್ ಇನ್ಸಪೆಕ್ಟರ್ ಸುತೇಷ್ ಕೆ.ಪಿ ಅವರು ಮಾತನಾಡಿ, ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಿದರೆ, ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಸದಾ ಎಲ್ಲರ ಕಷ್ಟಗಳಿಗೆ ಹತ್ತಿರದ ಸೇವಕರಾಗಿರುವ ರಿಕ್ಷಾ ಚಾಲಕರು, ವಿಶ್ವಾಸದ ಸೇವೆಯನ್ನು ನೀಡುತ್ತಿದ್ದಾರೆ. ಹಾಗಾಗಿ ರಿಕ್ಷಾ ಚಾಲಕರು ಸಾರ್ವಜನಿಕ ವಲಯದಲ್ಲಿ ಗೌರವವನ್ನು ಉಳಿಸಿಕೊಂಡಿದ್ದಾರೆ ಎಂದರು.


ಕಾರ್ಯಕ್ರಮ ಅಧ್ಯಕ್ಷತೆಯನ್ನು ಬಿಎಂಎಸ್ ಬಂಟ್ವಾಳ ರಿಕ್ಷಾ ಚಾಲಕ – ಮಾಲಕ ಸಂಘದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ವಹಿಸಿದ್ದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಸುರೇಶ್ ಸಾಲಿಯಾನ್, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬಿಎಂಎಸ್ ‌ಜಿಲ್ಲಾಧ್ಯಕ್ಷರು ವಕೀಲ ಅನಿಲ್ ಕುಮಾರ್,ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ‌ಮಣಿಹಳ್ಳ,ಮೋಟಾರ್ ಜನರಲ್ ಮಜ್ದೂರ್ ಸಂಘ ದ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ಉಮಾಶಂಕರ್ ಅವರು ಕಾರ್ಯಕ್ರಮ ‌ನಿರೂಪಿಸಿ ವಂದಿಸಿದರು. ಬಿಎಂಎಸ್ ರಿಕ್ಷಾ ಚಾಲಕ ಮಾಲಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕ್ರಷ್ಣ ಕುಮಾರ್ ಅವರು ಸಹಕರಿಸಿದರು.
ರಿಕ್ಷಾ ಚಾಲಕರಾಗಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿ, ಸಂಘದ ವಿವಿಧ ಹುದ್ದೆಯನ್ನು ಅಲಂಕರಿಸಿ, ಇದೀಗ ನರಿಕೊಂಬು ಗ್ರಾ.ಪಂ.ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಕುಮಾರ್, ರಿಕ್ಷಾ ಚಾಲಕರಾಗಿದ್ದಕೊಂಡು ಸತತ ಮೂರನೇ ಬಾರಿ ಅಮ್ಟಾಡಿ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದ ವಿಶ್ವನಾಥ ಕಲಾಯಿ, ರಿಕ್ಷಾ ಚಾಲಕರಾಗಿದ್ದಕೊಂಡು ನಾವೂರ ಗ್ರಾ.ಪಂ.ನ.ಎರಡನೇ ಅವಧಿಗೆ ಸದಸ್ಯರಾಗಿ ಆಯ್ಕೆಯಾದ ಜನಾರ್ಧನ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕರಾಟೆಯಲ್ಲಿ ರಾಷ್ಟ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಬಿ.ಎಂ.ಎಸ್.ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ ಅವರ ಮಗ 8 ವರ್ಷದ ಗುರುವಿಷ್ಣು ಅವರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!