ಉಡುಪಿ:ಪರಿಸರ ಸಮತೋಲನದಲ್ಲಿ ಚಿಟ್ಟೆಗಳ ಪಾತ್ರ ಮಹತ್ತರವಾದುದು ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಕೆ. ನಾಯ್ಕ್ ಹೇಳಿದ್ದಾರೆ.

ಉಡುಪಿಯ ಎಂಜಿಎO ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮತ್ತು ಐಕ್ಯೂ.ಎಸಿ ಜಂಟಿ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ, ಕಾಲೇಜಿನ ಸವಿತಾ ಶಾಸ್ತ್ರೀ ಚಿಟ್ಟೆ ಪಾರ್ಕ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಚಿಟ್ಟೆಗಳ ಜೀವಿತಾವಧಿ ಕೆಲವೇ ದಿನಗಳಾಗಿದ್ದರೂ ಹಸಿರು ಪರಿಸರದಲ್ಲಿ ತನ್ನ ಪಾತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತವೆ. ಕೃಷಿಗೆ ಇತರೆ ಕೀಟಗಳಿಂದ ತೊಂದರೆ ಆದರೂ ಚಿಟ್ಟೆಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ ಕೃಷಿ ಬೆಳೆಗಳಿಗೆ ಸಿಂಪಡಿಸುವ ಕೀಟ ನಾಶಕ, ರಾಸಾಯನಿಕ ಚಿಟ್ಟೆಗಳ ಸಂತತಿಗೆ ಮಾರಕವಾಗಿದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕೆ ಚಿಟ್ಟೆ ಪಾರ್ಕ್ ಗಳು ಅವಶ್ಯಕ. ಕರಾವಳಿ ಪರಿಸರಕ್ಕೆ ಚಿಟ್ಟೆ ಪಾರ್ಕ್ ನಿರ್ಮಾಣ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿರುವ ಕಡಿಮೆ ಜಾಗದಲ್ಲಿಯೂ ಚಿಟ್ಟೆ ಪಾರ್ಕ್ ನಿರ್ಮಿಸಿ, ಆರೋಗ್ಯಕರ ಪರಿಸರ ವ್ಯವಸ್ಥೆ ರೂಪಿಸಲು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ತರಂಗ ವಾರಪತ್ರಿಕೆಯ ವ್ಯಪಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ, ಎಂಜಿಎA ಕಾಲೇಜ್ ಟ್ರಸ್ಟ್ ನ ಅಧ್ಯಕ್ಷ ಟಿ. ಸತೀಶ್ ಯು. ಪೈ, ಮಣಿಪಾಲ ಇಸಾ ಟೆಕ್ನಾಲಜಿ ಪ್ರೈ.ಲಿ. ನಿರ್ದೇಶಕ ಡಾ. ಪ್ರಭಾಕರ್ ಶಾಸ್ತ್ರಿ , ಎಂಜಿಎO ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್, ಎಂಜಿಎO ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ, ಬೆಳ್ವಾಯಿ ಚಿಟ್ಟೆ ಪಾರ್ಕ್ನ ಸಮ್ಮಿಲನ್ ಶೆಟ್ಟಿ ಸೇರಿದಂತೆ ಹಲವಾರು ಉಪಸ್ಥಿತರಿದ್ರು.



