ಜನ ಮನದ ನಾಡಿ ಮಿಡಿತ

Advertisement

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಪ್ರದೇಶದ ಕಟ್ಟಡವೊಂದರಲ್ಲಿ ಭಾರತೀಯ ಕರೆನ್ಸಿಯಂತೆ ಕಾಣುವ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದಲ್ಲಿ ಜುಲೈ 16ರಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಇಬ್ರಾಹಿಂ, ಶರೀಪ್, ಸಂದೀಪ್ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್ ಹಾಗೂ ಇರ್ಷಾದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ 500 ಮುಖಬೆಲೆಯ ಒಂದು ನೋಟು, 500 ಮುಖಬೆಲೆಯ ನೋಟುಗಳ ಮಾದರಿಯಂತೆ ಮುದ್ರಿತವಾಗಿದ್ದ 21 ಎ-4 ಗಾತ್ರದ ಹಾಳೆಗಳು, ಕಂಪ್ಯೂಟರ್, ಝೆರಾಕ್ಸ್ ಯಂತ್ರ, ಸೀಲ್‌ಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಭಾರತೀಯ ನ್ಯಾಯ ಸಂಹಿತೆ -2023ರ ಕಲಂ 178 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

ಕಾಸರಗೋಡು: ಮುಗುರೋಡ್‌ನಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರ ಸಾವು, ಪತ್ನಿಗೆ ಗಂಭೀರ ಗಾಯ..!

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ: ಇಬ್ಬರು ಆರೋಪಿಗಳ ಬಂಧನ…!

error: Content is protected !!