ಬಂಟ್ವಾಳ:ಪಾಣೆಮoಗಳೂರು ಸಮೀಪದ ಅಕ್ಕರಂಗಡಿ ಮಸೀದಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಬಂಟ್ವಾಳ ಸಂಚಾರ ಠಾಣೆಯ ಕಾಮಗಾರಿಯನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವೀಕ್ಷಣೆ ನಡೆಸಿದ್ದಾರೆ.

ಅಕ್ಕರಂಗಡಿಯಲ್ಲಿ ಸುಮಾರು 75 ಸೆಂಟ್ಸ್ ಜಾಗದಲ್ಲಿ ಸರಿಸುಮಾರು ಎರಡೂ ವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಅವರು ಠಾಣೆಯ ಹೊರ ಹಾಗೂ ಒಳವಿನ್ಯಾಸಗಳ ಬಗ್ಗೆ ಚರ್ಚಿಸಿ, ಕೆಲವು ಮಾರ್ಪಡುಗಳನ್ನು ಮಾಡುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ತಿಳಿಸಿದ್ದಾರೆ. ಠಾಣೆಯ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ಕಳಪೆಯಾಗಬಾರದು. ಉತ್ತಮ ರೀತಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಪೋಲೀಸ್ ಹೌಸಿಂಗ್ ಕಾರ್ಪೋರೇಷನ್ ಎ.ಇ.ಇ.ರಾಜೇಶ್, ಗುತ್ತಿಗೆದಾರ ಪುನೀತ್ ಶೆಟ್ಟಿ, ಡಿ.ವೈ.ಎಸ್.ಪಿ. ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಟ್ರಾಫಿಕ್ ಪಿ.ಎಸ್ಐ ಗಳಾದ ಸುತೇಶ್ ಮತ್ತು ಸಂಜೀವ ಅವರು ಹಾಜರಿದ್ದರು.



