ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.

ಕಾವಳ ಪಡೂರು ಗ್ರಾಮದ ವಗ್ಗ ಸಮೀಪದ ಕೆಲೆಂಜಕೋಡಿ ಮಾಂಗಜೆ ನಿವಾಸಿ ಜಾನ್ ವಾಸ್ (88) ಕಾಣೆಯಾಗಿದ್ದ ವ್ಯಕ್ತಿ.ಅವರನ್ನು ಗೋರೆಮಾರ್ ಗುಡ್ಡವೊಂದರಲ್ಲಿ ಪತ್ತೆ ಹಚ್ಚಿದ ಪೋಲೀಸರು ಬಳಿಕ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಡಿಕೆ ಮಾರಟ ಮಾಡುವ ಉದ್ದೇಶದಿಂದ ಪೇಟೆಗೆ ಬಂದ ಮಗನ‌ಜೊತೆಗೆ ಬಂದಿದ್ದ ವೃದ್ದ ಜಾನ್ ವಾಸ್ ಅವರು ಡಿ.6 ರಂದು ಬಿಸಿರೋಡಿನ ‌ಕೈಕಂಬ ಎಂಬಲ್ಲಿಂದ ಕಾಣೆಯಾಗಿದ್ದರು.
ಹಾಗಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಇವರ ಪತ್ತೆಗಾಗಿ ಮನೆಯವರು ಪೋಲಿಸರಿಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದರು.


ಇವರ ದೂರಿನಂತೆ ಬಂಟ್ವಾಳ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರ ನೇತ್ರತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಇರ್ಶಾದ್ ಅವರು ಬಿಸಿರೋಡಿನ ಸುತ್ತಮುತ್ತಲು ಸ್ಚತಃ ಕಾರಿನ ಮೂಲಕ ನಿನ್ನೆಯಿಂದ ಹುಡುಕಾಟ ನಡೆಸಿ ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಣೆಯಾದ ಜಾನ್ ವಾಸ್ ಅವರ ಪತ್ತೆಗಾಗಿ ‌ಗುರುವಾರ ಸಂಜೆಯಿಂದ ಇವರು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಇಂದು ಸಂಜೆ ವೇಳೆ ಗೋರೆಮಾರ್ ಗುಡ್ಡವೊಂದರಲ್ಲಿ ಇವರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿ ಅವರನ್ನು ಕುಟುಂಬದ ಕೈಗೆ ಒಪ್ಪಿಸಿದ್ದಾರೆ.


ನಿನ್ನೆಯಿಂದ ಹೊಟ್ಟೆಗೆ ಊಟವಿಲ್ಲದೆ ಕೊಳಕು ಬಟ್ಟೆಯಲ್ಲಿದ್ದ ಜಾನ್ ವಾಸ್ ಅವರಿಗೆ ತಿನ್ನಲು ‌ಆಹಾರ ನೀಡಿ, ಬಟ್ಟೆಯನ್ನು ಬದಲಾವಣೆ ಮಾಡಿದ ಪೋಲೀಸರು ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಪತ್ತೆ ಹಚ್ಚಿದ ಕೂಡಲೇ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ರಾಜೇಶ್ ಮತ್ತು ಇರ್ಶಾದ್ ಅವರ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕೊಚ್ಚಿ: ವಿಜೃಂಭಣೆಯ ಕೇರಳ-ಕರ್ನಾಟಕ ಜಾನಪದ ಉತ್ಸವ…!

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

error: Content is protected !!