ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಬಿಸಿರೋಡಿನಿಂದ ಮಂಗಳೂರಿಗೆ ಸಿಟಿ ಬಸ್ ಪ್ರಾರಂಭಿಸಿ ಪುಣ್ಯಕಟ್ಟಿಕೊಳ್ಳಿ…

ಇದೇನು ವಿಚಾರ ಅಂದುಕೊಂಡಿದ್ದೀರಾ? ಬಿಸಿರೋಡಿನಲ್ಲಿ ಬಸ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಸಮೂಹ, ಕೊನೆಗೆ ಬಸ್ ವ್ಯವಸ್ಥೆ ಇಲ್ಲದೆ ಸೊರಗಿಹೋದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಈ ಅಭಿಯಾನ ವನ್ನು ಆರಂಬಿಸಿದ್ದಾರೆ.


ಬೆಳಿಗ್ಗೆ ಸುಮಾರು 7 ಗಂಟೆಯಿಂದ 9 ಗಂಟೆವರೆಗೂ ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿ ಕಿಕ್ಕಿರಿದು ಬಸ್ ಗಾಗಿ ಕಾಯುತ್ತಾ ನಿಂತಿರುವ ವಿದ್ಯಾರ್ಥಿಗಳು….
ಕೊನೆಗೆ ಸಿಕ್ಕ ಸಿಕ್ಕ ಬಸ್ ಗಳ ಪುಟ್ ಪಾತ್ ನಲ್ಲಿ ‌ನೇತಾಡಿಕೊಂಡು ಜೀವದ ಭಯದಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ಇಲಾಖೆಗೆ ಆಗಲಿ ಜನಪ್ರತಿನಿಧಿಗಳಾಗಲಿ ಸಾಧ್ಯವಾಗಿಲ್ಲ ಅನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳು ಅಭಿಯಾನ ಪ್ರಾರಂಭ ಮಾಡಿದ್ದಾರೆ. ಇದನ್ನು ಕಂಡಾದರೂ ಜನಪ್ರತಿನಿಧಿಗಳು ಮತ್ತು ಇಲಾಖೆ ಎಚ್ಚೆತ್ತ ಕೊಂಡು ವ್ಯವಸ್ಥೆ ಕಲ್ಪಿಸಿಯಾರು ಎಂಬ ಭರವಸೆ ಇವರದು.


ಬಸ್ ಒದಗಿಸಿ: ಅಭಿಯಾನ:ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಬಸ್ ಗಾಗಿ ಬಿಸಿರೋಡಿನಲ್ಲಿ ಕಾಯುವುದು ಮತ್ತು ಬಸ್ ನ ಪುಟ್ ಪಾತ್ ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ಅನೇಕ ವರ್ಷಗಳಿಂದ ನೋಡುತ್ತಾ ಇದ್ದೇವೆ.
ಕನಿಷ್ಟ ಪಕ್ಷ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಕೆ.ಎಸ್.ಆರ್.ಟಿ.ಬಸ್ ನಿಗಮ ದವರು ಹೆಚ್ಚು ವರಿ ಬಸ್ ಹಾಕಿದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ.


ಬೆಳಿಗ್ಗೆ ಕಾಲೇಜಿಗೆ ತೆರಳುವ ವೇಳೆ ಪುತ್ತೂರು ಕಡೆಯಿಂದ ವಿಟ್ಲ ಮತ್ತು ಬೆಳ್ತಂಗಡಿ ಕಡೆಯಿಂದ ಬರುವ ಬಹುತೇಕ ಎಲ್ಲಾ ಬಸ್ ಗಳಲ್ಲಿ ಪ್ಯಾಕಪ್ ಆಗಿರುತ್ತದೆ. ಬಿಸಿರೋಡಿಗೆ ಬರುವಾಗ ಬಸ್ ಹತ್ತಲು ಸಾಧ್ಯವಿಲ್ಲ ದಂತೆ ಜನ ಕಿಕ್ಕಿರಿದು ತುಂಬಿಕೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ಮೆಟ್ಟಿಲು ಹತ್ತಲು ಜಾಗವಿಲ್ಲದೆ ನೇತಾಡಿಕೊಂಡು ಹೋಗಬೇಕಾಗಿದೆ.
ಬಸ್ ವ್ಯವಸ್ಥೆ ಸರಿಯಲ್ಲ ದ ಕಾರಣ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಅಸಾಧ್ಯವಾಗುತ್ತಿದೆ.
ಬೆಳಿಗ್ಗೆ ಹೊತ್ತಿನ‌ ಪಾಠಗಳನ್ನು ಮಿಸ್ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಕಳೆದ ವಾರ ಬಸ್ ನಲ್ಲಿ ನೇತಾಡುತ್ತಿದ್ದಂತೆ ಬಸ್ ನ ಬಾಗಿಲು ತುಂಡಾಗಿ ವಿದ್ಯಾರ್ಥಿಗಳ ಕೈಯಲ್ಲಿ ಬಂದಿತ್ತು. ಈ ರೀತಿಯಲ್ಲಿ ಜೀವದ ಹಂಗು ತೊರೆದು ಪ್ರಯಾಣಿಸುವ ವಿದ್ಯಾರ್ಥಿಗಳ ಜೀವಕ್ಕೆ ಏನಾದರೂ ಆದರೆ ಬೆಲೆ ಕೊಡುವವರು ಯಾರು? ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳೆ ಇತ್ತ ಚಿತ್ತ ಹರಿಸಿ ಎಂದು ಅವರು ಮನವಿ ಮಾಡಿದ್ದಾರೆ ‌. ಹಾಗಾಗಿ ಸಿ.ಟಿ.ಬಸ್ ನ ವ್ಯವಸ್ಥೆ ಯಾದರೂ ಕಲ್ಪಿಸಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರರ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ..!

ಮಂಗಳೂರು: ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಅಪಾಯದ ಮುನ್ಸೂಚನೆ; ಕೆತ್ತಿಕಲ್ ಗುಡ್ಡ ಮತ್ತೆ ಕುಸಿತ..!

ಬೆಳ್ತಂಗಡಿ: ಪ್ರಚೋದನಾಕಾರಿ ಭಾಷಣ ಪ್ರಕರಣ; ಎಸ್ಟಿಪಿಐ ಮುಖಂಡನಿಗೆ 6 ತಿಂಗಳ ಜೈಲು ಶಿಕ್ಷೆ…!

ಗದಗ: ಚಿಪ್ಸ್ ತರಲು ಹೋದ ಬಾಲಕಿಗೆ ಬೀದಿ ನಾಯಿಗಳ ದಾಳಿ; ಆಸ್ಪತ್ರೆಗೆ ದಾಖಲು…!

ಬಂಟ್ವಾಳ: ಮಳೆ ನೀರಿನ ಅವಾಂತರಕ್ಕೆ ಬ್ರೇಕ್; ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ…!

error: Content is protected !!