ಜನ ಮನದ ನಾಡಿ ಮಿಡಿತ

Advertisement

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರರ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ..!

 ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗದೆ, ಸಮುದ್ರದಲ್ಲಿ ಮೀನುಗಳ ಸಮೃದ್ಧಿ ಇರಲಿ ಹಾಗೂ ಮೀನುಗಾರಿಕೆಗೆ ತೆರಳುವ ವೇಳೆ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸಂಪ್ರದಾಯಬದ್ಧವಾಗಿ ಸಮುದ್ರ ಪೂಜೆ ನೆರವೇರಿಸಿದರು.

ಅರ್ಚಕ ವೇದಮೂರ್ತಿ ವಿಠಲ್‌ದಾಸ್ ಭಟ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಪರ್ಸಿನ್ ಬೋಟ್, 320 ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘದ ಸದಸ್ಯರು ಪಾಲ್ಗೊಂಡು ಸಮುದ್ರ ರಾಜನಿಗೆ ಹಾಲು, ತೆಂಗಿನಕಾಯಿ, ಫಲ-ಪುಷ್ಪಗಳನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎರಡು ತಿಂಗಳ ಮೀನುಗಾರಿಕಾ ನಿಷೇಧ ಜುಲೈ 31ಕ್ಕೆ ಅಂತ್ಯಗೊಂಡಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಪ್ರಕ್ಷುಬ್ಧ ವಾತಾವರಣ ಮುಂದುವರಿದಿರುವುದರಿಂದ ಮೀನುಗಾರರು ಇನ್ನೂ ಕಡಲಿಗಿಳಿಯಲು ಸಾಧ್ಯವಾಗಿಲ್ಲ. ಪ್ರಸ್ತುತ ಗಂಗೊಳ್ಳಿ ಬಂದರಿನಲ್ಲಿ ದಡದಲ್ಲಿರುವ ಬೋಟ್‌ಗಳನ್ನು ನೀರಿಗೆ ಇಳಿಸಲು ಸಿದ್ಧತೆ, ಬಲೆ ಹೆಣೆಯುವುದು, ಮೀನುಗಾರಿಕಾ ಪರಿಕರಗಳ ಜೋಡಣೆ ಹಾಗೂ ಬೋಟ್‌ಗಳಿಗೆ ಬಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ. ಸಮುದ್ರದ ವಾತಾವರಣ ಅನುಕೂಲಕರವಾದರೆ ಆಗಸ್ಟ್ 16ರ ಬಳಿಕ ಗಂಗೊಳ್ಳಿಯ ಮೀನುಗಾರರು ಮೀನುಗಾರಿಕೆಗೆ ತೆರಳುವ ನಿರೀಕ್ಷೆಯಿದೆ ಎಂದು ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಅಪಾಯದ ಮುನ್ಸೂಚನೆ; ಕೆತ್ತಿಕಲ್ ಗುಡ್ಡ ಮತ್ತೆ ಕುಸಿತ..!

ಬೆಳ್ತಂಗಡಿ: ಪ್ರಚೋದನಾಕಾರಿ ಭಾಷಣ ಪ್ರಕರಣ; ಎಸ್ಟಿಪಿಐ ಮುಖಂಡನಿಗೆ 6 ತಿಂಗಳ ಜೈಲು ಶಿಕ್ಷೆ…!

ಗದಗ: ಚಿಪ್ಸ್ ತರಲು ಹೋದ ಬಾಲಕಿಗೆ ಬೀದಿ ನಾಯಿಗಳ ದಾಳಿ; ಆಸ್ಪತ್ರೆಗೆ ದಾಖಲು…!

ಬಂಟ್ವಾಳ: ಮಳೆ ನೀರಿನ ಅವಾಂತರಕ್ಕೆ ಬ್ರೇಕ್; ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ…!

ಕೊಪ್ಪಳ: ಕೊಪ್ಪಳದಲ್ಲಿ ವಿಂಡ್ ಮಿಲ್ ಕಂಪನಿಗಳ ವಿರುದ್ಧ ರೈತರ ಆಕ್ರೋಶ; ದಬ್ಬಾಳಿಕೆ, ಮರಗಳ ನಾಶ ಆರೋಪ…!

ಅಮೆರಿಕ: 18ನೇ ವಯಸ್ಸಿನಲ್ಲೇ ಕಾಲೇಜು ಪ್ರೊಫೆಸರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ನಾಥನ್ ಥಾಮಸ್

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

error: Content is protected !!